ಅಮೆರಿಕ: 3 ವರ್ಷದ ಬಾಲಕನ ಗುಂಡೇಟಿಗೆ ಶಿಶು ಮೃತ್ಯು

Update: 2022-10-21 17:46 GMT

ನ್ಯೂಯಾರ್ಕ್, ಅ.21: ಅಮೆರಿಕ(America)ದ ಪೆನಿಸಿಲ್ವೇನಿಯಾದ ಲ್ಯಾನ್ಕಸ್ಟರ್ನಲ್ಲಿ 3 ವರ್ಷದ ಮಗುವೊಂದು ಆಕಸ್ಮಿಕವಾಗಿ ಪಿಸ್ತೂಲ್ ನ (of the pistol)ಟ್ರಿಗರ್ ಒತ್ತಿದಾಗ 15 ತಿಂಗಳ ಮಗುವೊಂದು ಮೃತಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಟುಂಬದ ವಯಸ್ಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

3 ದಿನದ ಹಿಂದೆ ಈ ಘಟನೆ ನಡೆದಿದ್ದು ಗುಂಡು ಹಾರಿಸಿದ ಮಗುವಿನ ಹೆತ್ತವರು ಹಾಗೂ ಮೃತಪಟ್ಟ ಮಗುವಿನ ಹೆತ್ತವರು ಸಂಬಂಧಿಕರಾಗಿದ್ದಾರೆ. ಆಕಸ್ಮಿಕ ಹಾರಿದ ಗುಂಡಿನಿಂದ ತೀವ್ರ ಗಾಯಗೊಂಡ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅದು ಮೃತಪಟ್ಟಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕುಟುಂಬದ ಹಿರಿಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News