ದೀಪಾವಳಿ: ಈ ರಾಜ್ಯದಲ್ಲಿ ಏಳು ದಿನ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಇಲ್ಲ!
ભારતીય સંસ્કૃતિનો સૌથી મોટો ઉજાસ ઉત્સવ એટલે દિવાળી. રંગોળીઓના રંગ, મિષ્ટાનોની ભરમાર અને દીવા તેમજ ફટાકડાનો ઉમંગ લઈને આ તહેવાર આવે છે. આ તહેવાર નિમિત્તે મૃદુ અને મક્કમ ગુજરાત સરકારના મુખ્ય મંત્રી શ્રી @Bhupendrapbjp જી નો વધુ એક પ્રજાલક્ષી નિર્ણય pic.twitter.com/V1omwopeWV
— Harsh Sanghavi (@sanghaviharsh) October 21, 2022ಹೊಸದಿಲ್ಲಿ: ಗುಜರಾತ್‍ನಲ್ಲಿ ಈ ತಿಂಗಳ 21ರಿಂದ 27ರವರೆಗೆ ಅಂದರೆ ದೀಪಾವಳಿ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಗುಜರಾತ್‍ನ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ. ಇದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಇನ್ನೊಂದು ಜನಪರ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.
ಈ ವರ್ಷದ ಕೊನೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ದಶಕದಿಂದ ಇರುವ ತನ್ನ ಹಿಡಿತವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ndtv.com ವರದಿ ಮಾಡಿದೆ.
"ಕಾನೂನು ಉಲ್ಲಂಘಿಸುವ ನಿರ್ಧಾರ ಮಾಡಬೇಡಿ" ಎಂದು ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ. "ಯಾರಾದರೂ ನಿಯಮ ಉಲ್ಲಂಘಿಸಿದರೆ, ಗುಜರಾತ್ ಪೊಲೀಸರು ಹೂವು ನೀಡುವ ಮೂಲಕ ಅವರನ್ನು ಮನವೊಲಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
"ದೀಪಾವಳಿ ಬೆಳಕಿನ ಹಬ್ಬ. ರಂಗೋಲಿಯ ಬಣ್ಣ, ಸಿಹಿ, ದೀಪ ಮತ್ತು ಪಟಾಕಿಗಳ ರೋಮಾಂಚನ ಇದಕ್ಕೆ ಮೆರುಗು ನೀಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಹಲವು ಮಂದಿ ಟ್ವಿಟ್ಟರ್‍ನಲ್ಲಿ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದು ಜನತೆ ಸ್ವಯಂಪ್ರೇರಿತರಾಗಿ ನಿಯಮ ಅನುಸರಿಸಲು ಉತ್ತೇಜನ ನೀಡುತ್ತದೆ ಎಂದು ಬಣ್ಣಿಸಿದ್ದಾರೆ.
ભારતીય સંસ્કૃતિનો સૌથી મોટો ઉજાસ ઉત્સવ એટલે દિવાળી. રંગોળીઓના રંગ, મિષ્ટાનોની ભરમાર અને દીવા તેમજ ફટાકડાનો ઉમંગ લઈને આ તહેવાર આવે છે. આ તહેવાર નિમિત્તે મૃદુ અને મક્કમ ગુજરાત સરકારના મુખ્ય મંત્રી શ્રી @Bhupendrapbjp જી નો વધુ એક પ્રજાલક્ષી નિર્ણય pic.twitter.com/V1omwopeWV
— Harsh Sanghavi (@sanghaviharsh) October 21, 2022