ರಶ್ಯದಿಂದ 36 ಕ್ಷಿಪಣಿ ಪ್ರಯೋಗ: ಉಕ್ರೇನ್ ಆರೋಪ

Update: 2022-10-22 18:51 GMT

ಕೀವ್, ಅ.22: ಶುಕ್ರವಾರ ರಾತ್ರಿ ರಶ್ಯದ ಸೇನೆ ಉಕ್ರೇನ್ ಮೇಲೆ ಬೃಹತ್ ಆಕ್ರಮಣ ನಡೆಸಿದ್ದು 36 ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಶನಿವಾರ ಹೇಳಿದ್ದಾರೆ.

ಆಕ್ರಮಣಕಾರರು ನಮ್ಮ ದೇಶವನ್ನು ಭಯಭೀತಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಶತ್ರುಗಳು ರಾತ್ರಿಯಿಡೀ ಕನಿಷ್ಟ 36 ಕ್ಷಿಪಣಿ ಪ್ರಯೋಗಿಸಿದ್ದು ಇದರಲ್ಲಿ ಹಲವನ್ನು ನಮ್ಮ ಸೇನೆ ಹೊಡೆದುರುಳಿಸಿದೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ಮಧ್ಯೆ, ದಕ್ಷಿಣ ಖೆರ್ಸಾನ್ ವಲಯ(ತನ್ನ ಸ್ವಾಧೀನದಲ್ಲಿದೆ ಎಂದು ರಶ್ಯ ಪ್ರತಿಪಾದಿಸುವ ಪ್ರದೇಶ)ದಲ್ಲಿ ರಶ್ಯ ನೇಮಿಸಿರುವ ಅಧಿಕಾರಿಗಳು, ಉಕ್ರೇನ್ ಸೇನೆಯ ಪ್ರತಿದಾಳಿಯ ಹಿನ್ನೆಲೆಯಲ್ಲಿ ತಕ್ಷಣ ನಗರವನ್ನು ತೊರೆಯುವಂತೆ ಇಲ್ಲಿನ ನಿವಾಸಿಗಳಿಗೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News