×
Ad

ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ರೋಚಕ ಜಯ: ವಿರಾಟ್ ಕೊಹ್ಲಿಯನ್ನು ಎತ್ತಿಕೊಂಡು ಕುಣಿದಾಡಿದ ರೋಹಿತ್

Update: 2022-10-23 20:08 IST
photo: twitter

ಮೆಲ್ಬೋರ್ನ್: ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟದ ನೆರವಿನಿಂದ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತವು ಪಾಕಿಸ್ತಾನವನ್ನು 4 ವಿಕೆಟ್‌ನಿಂದ ಮಣಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಭಾರತ ಸೂಪರ್-12ರ ಸುತ್ತಿನ ಗ್ರೂಪ್-1ರ ಪಂದ್ಯವನ್ನು ರವಿವಾರ ರೋಚಕವಾಗಿ ಗೆದ್ದುಕೊಂಡಿದೆ. ಆರ್. ಅಶ್ವಿನ್ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವಿನ ರನ್ ದಾಖಲಿಸಿದ ತಕ್ಷಣ ಭಾರತದ ಆಟಗಾರರೆಲ್ಲರೂ ಮೈದಾನಕ್ಕೆ ಧಾವಿಸಿ ವಿರಾಟ್ ಕೊಹ್ಲಿಯವರನ್ನು ಆಲಂಗಿಸಿಕೊಂಡರು.

ನಾಯಕ ರೋಹಿತ್ ಶರ್ಮಾ ಅವರು ಓಡಿ ಬಂದು ವಿರಾಟ್ ಕೊಹ್ಲಿಯವರನ್ನು ತಬ್ಬಿ ಎತ್ತಿಕೊಂಡು ಕುಣಿದಾಡಿದರು. ಇದೀಗ ಈ ವೀಡಿಯೊ, ಫೋಟೊಗಳು ವೈರಲ್ ಆಗಿವೆ. ಇದೇ ವೇಳೆ ಪಂದ್ಯ ಗೆಲ್ಲಿಸಿಕೊಟ್ಟ ಕೊಹ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇದು ನಾನು ನೋಡಿದ ಅತ್ಯುತ್ತಮ ಪಂದ್ಯ: ಅನುಷ್ಕಾ ಶರ್ಮಾ

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿಯವರ ಪತ್ನಿ ಅನುಷ್ಕಾ ಶರ್ಮಾ, ಈ ಪಂದ್ಯ ನನ್ನ ಜೀವನದಲ್ಲೇ ನಾನು ನೋಡಿದ ಅತ್ಯುತ್ತಮ ಪಂದ್ಯವಾಗಿದೆ ಎಂದು ಕೊಂಡಾಡಿದ್ದಾರೆ.

ಈ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಾನು ಕೋಣೆಯಲ್ಲಿ ಈ ಪಂದ್ಯ ನೋಡುತ್ತಿದ್ದೆ. ನಾನು ಕುಣಿದು ಕುಪ್ಪಳಿಸಿದೆ. ಆದರೆ ನಮ್ಮ ಮಗುವಿಗೆ ನಾನೇಕೆ ನೃತ್ಯ ಮಾಡಿದೆ ಎಂದು ಗೊತ್ತಿಲ್ಲ. ಆದರೆ ಮುಂದೊಂದು ದಿನ ಇದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News