ದಕ್ಷಿಣ ಏಶ್ಯಾದ ಪ್ರಥಮ ಡಿಸ್ನಿಲ್ಯಾಂಡ್ ಶ್ರೀಲಂಕಾದಲ್ಲಿ ಆರಂಭ: ವರದಿ

Update: 2022-10-23 18:28 GMT
PHOTO:TWITTER@Disneyland

ಕೊಲಂಬೊ, ಅ.23: ದಕ್ಷಿಣ ಏಶ್ಯಾದ ಪ್ರಪ್ರಥಮ ಡಿಸ್ನಿಲ್ಯಾಂಡ್ ಅನ್ನು ಶ್ರೀಲಂಕಾದ ಹಂಬನ್‌ತೋಟದಲ್ಲಿ ಆರಂಭಿಸುವ ಬಗ್ಗೆ ಚರ್ಚಿಸಲು ಡಿಸ್ನಿಲ್ಯಾಂಡ್‌ನ ಅಧಿಕಾರಿಗಳ ತಂಡವೊಂದು ನವೆಂಬರ್‌ನಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಲಿದೆ ಎಂದು ವರದಿಯಾಗಿದೆ.

 ದಕ್ಷಿಣ ಏಶ್ಯಾದ ಪ್ರಥಮ ಡಿಸ್ನಿಲ್ಯಾಂಡ್ ಅನ್ನು ಶ್ರೀಲಂಕಾದ ಹಂಬನ್‌ತೋಟದಲ್ಲಿ ಆರಂಭಿಸುವ ಪ್ರಸ್ತಾವನೆಯಿದೆ. ಡಿಸ್ನಿಲ್ಯಾಂಡ್‌ನ ಆಹ್ವಾನದ ಮೇರೆಗೆ ದೇಶದ ಪ್ರವಾಸೋದ್ಯಮ ಸಚಿವೆ ಡಯಾನಾ ಗಮಗೆ ಶೀಘ್ರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಡಿಸ್ನಿಲ್ಯಾಂಡ್ ಅಧಿಕಾರಿಗಳು ಲಂಕಾಕ್ಕೆ ಆಗಮಿಸಲಿದ್ದಾರೆ. ಈ ಯೋಜನೆ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ‘ಡೈಲಿ ಮಿರರ್’ ವರದಿ ಮಾಡಿದೆ.

 ಈ ಮಧ್ಯೆ, ‘ಮಿಸ್ ಟೂರಿಸಂ ವರ್ಲ್ಡ್- ಇಂಟರ್‌ನ್ಯಾಷನಲ್ ಫಿನಾಲೆ 2022’ರ ಆತಿಥೇಯತ್ವದ ಹಕ್ಕನ್ನು ಶ್ರೀಲಂಕಾ ಪಡೆದಿದೆ ಎಂದು ವರದಿಯಾಗಿದೆ. ಮಿಸ್ ಟೂರಿಸಂ ವರ್ಲ್ಡ್- ಇಂಟರ್‌ನ್ಯಾಷನಲ್ ಫಿನಾಲೆ’ಯ 75ನೇ ಆವೃತ್ತಿಯ ಆತಿಥೇಯಕ್ಕೆ ಬಿಡ್ ಸಲ್ಲಿಸಿದ್ದ ಕ್ರೊವೇಷಿಯಾ ಮತ್ತು ರಶ್ಯ, ಶ್ರೀಲಂಕಾದ ಪರವಾಗಿ ಸ್ಪರ್ಧೆಯಿಂದ ಹಿಂದೆ ಸರಿದು ಶ್ರೀಲಂಕಾವನ್ನು ಬೆಂಬಲಿಸಿವೆ .80 ದೇಶಗಳ ಸ್ಪರ್ಧಿಗಳು ಪಾಲ್ಗೊಳ್ಳುವ ಈ ಸ್ಪರ್ಧೆ ಡಿಸೆಂಬರ್ 8ರಿಂದ 21ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದ್ದು ಇದರಿಂದ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ದೊರಕಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News