ಕಿಂಗ್ ಚಾರ್ಲ್ಸ್ ಮೇಣದ ಪ್ರತಿಮೆಗೆ ಕೇಕ್ ಮೆತ್ತಿದ ಪರಿಸರ ಹೋರಾಟಗಾರರು

Update: 2022-10-25 13:03 GMT
Photo: Twitter/@TalkTV

ಲಂಡನ್: ಲಂಡನ್ ನಗರದ ವಿಶ್ವ ವಿಖ್ಯಾತ ಮ್ಯಾಡೆಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಬ್ರಿಟಿಷ್ ದೊರೆ ಚಾರ್ಲ್ಸ್ (King Charles) ಅವರ ಮೇಣದ ಪ್ರತಿಮೆಯ ಮುಖಕ್ಕೆ 'ಜಸ್ಟ್ ಸ್ಟಾಪ್ ಆಯಿಲ್' (Just Stop Oil) ಪ್ರತಿಭಟನಾಕಾರರು ಕಸ್ಟರ್ಡ್ ಪೈ ಸವರಿದ ಘಟನೆ ಸೋಮವಾರ ವರದಿಯಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಿಗ್ಗೆ 10.45ಕ್ಕೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಸರಕಾರ ಎಲ್ಲಾ ಹೊಸ ತೈಲ ಮತ್ತು ಅನಿಲ ಲೈಸನ್ಸ್ ಮತ್ತು ಅನುಮತಿಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಪರಿಸರ ಹೋರಾಟಗಾರರು ಹೋರಾಡುತ್ತಿದ್ದಾರೆ.

"ನಾವು ನಮ್ಮ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ರಕ್ಷಿಸಬೇಕಿರುವುದರಿಂದ ಇಲ್ಲಿದ್ದೇವೆ. ಈ ಹಸಿರು ಮತ್ತು ಸುಂದರ ಭೂಮಿಯನ್ನು ರಕ್ಷಿಸಿ ಎಲ್ಲರಿಗಾಗಿ ಉತ್ತಮಗೊಳಿಸಬೇಕೆಂದು ನಾವು ಬಯಸಿದ್ದೇವೆ. ವಿಜ್ಞಾನವು ಸ್ಪಷ್ಟವಾಗಿದೆ, ಬೇಡಿಕೆ ಸರಳವಾಗಿದೆ, ಹೊಸ ತೈಲ ಮತ್ತು ಅನಿಲ ಪರವಾನಗಿ ನಿಲ್ಲಿಸಿ. ಇಟ್ ಈಸ್ ಎ ಪೀಸ್ ಆಫ್ ಕೇಕ್,'' ಎಂದು ಪ್ರತಿಭಟನಾಕಾರರು ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News