×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-10-25 21:18 IST

ಮಲ್ಪೆ, ಅ.25: ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದ ಕಡೆಕಾರು ಗ್ರಾಮದ ರಾಜು ಗಜಾನಂ ನಾಯ್ಕ (52) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಅ.೨೩ರಂದು ರಾತ್ರಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಮಾನಸಿಕ ಖಾಯಿಲೆ ಬಳಲುತ್ತಿದ್ದ ಕುಂಜಿಬೆಟ್ಟು ಮೂಡು ಪೆರಂಪಳ್ಳಿಯ ಲಿಲ್ಲಿ ಡಿಸೋಜ (70) ಎಂಬವರು ಅ.24ರಂದು ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News