ಕೆರೆಗೆ ಬಿದ್ದು ವೃದ್ಧೆ ಮೃತ್ಯು
Update: 2022-10-25 21:19 IST
ಕುಂದಾಪುರ, ಅ.25: ವೃದ್ಧೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅ.24ರಂದು ಸಂಜೆ ವೇಳೆ ಬಳ್ಕೂರು ಗ್ರಾಮದ ಹೊಳೆ ಬಾಗಿಲು ಎಂಬಲ್ಲಿ ನಡೆದಿದೆ.
ಮೃತರನ್ನು ಬಳ್ಕೂರು ಗ್ರಾಮದ ಹೊಳೆಬಾಗಿಲು ನಿವಾಸಿ ಪಾರ್ವತಿ ಶೆಡ್ತಿ ಎಂದು ಗುರುತಿಸಲಾಗಿದೆ. ವಯೋಸಹಜ ವೃದ್ದಾಪ್ಯ ಬಳಲುತ್ತಿದ್ದ ಮನೆ ಸಮೀಪದ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.