ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್:‌ ನೆದರ್ಲೆಂಡ್‌ ವಿರುದ್ಧ ಭಾರತಕ್ಕೆ ಸುಲಭ ಜಯ‌

Update: 2022-10-27 11:36 GMT

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲೆಂಡ್‌ ತಂಡಗಳ ನಡುವಿನ ವಿಶ್ವಕಪ್‌ ಟಿ-ಟ್ವೆಂಟಿ ಸರಣಿಯ 23ನೇ ಪಂದ್ಯಾಟದಲ್ಲಿ ಭಾರತ ಸುಲಭ ಜಯ ಸಾಧಿಸಿದೆ. ಭಾರತ ನೀಡಿದ್ದ 180 ರನ್‌ ಗಳ ಗುರಿಯನ್ನು ತಲುಪಲು ಸಾಧ್ಯವಾಗದ ನೆರ್ಲೆಂಡ್‌ ತಂಡವು 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. 

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡದ ಪರ ಕೆ.ಎಲ್‌ ರಾಹುಲ್‌ ಹೊರತುಪಡಿಸಿ ಉಳಿದ ಮೂವರು ಆಟಗಾರರು ಅರ್ಧಶತಕ ದಾಖಲಿಸಿದರು. ವಿರಾಟ್‌ ಕೊಹ್ಲಿ 62, ರೋಹಿತ್‌ ಶರ್ಮ 53 ಹಾಗೂ ಸೂರ್ಯಕುಮಾರ್‌ ಯಾದವ್‌ ಆಕರ್ಷಕ 51 ರನ್‌ ಗಳನ್ನು ಗಳಿಸಿದರು. ಬಳಿಕ ಬ್ಯಾಟಿಂಗ್‌ ಗೆ ಇಳಿದ ನೆದರ್ಲೆಂಡ್‌ ತಂಡದ ಪರ ಟಿಮ್‌ ಪ್ರಿಂಗಲ್‌ 20 ರನ್‌ ಗಳಿಸಿದರು. ಬೌಲಿಂಗ್‌ ನಲ್ಲಿ ಭುವನೇಶ್ವರ್‌ ಕುಮಾರ್.‌ ಅರ್ಶದೀಪ್‌ ಸಿಂಗ್‌, ಅಕ್ಸರ್‌ ಪಟೇಲ್‌ ಹಾಗೂ ಅಶ್ವಿನ್‌ ತಲಾ ಎರಡು ವಿಕೆಟ್‌ ಪಡೆದರೆ, ಮುಹಮ್ಮದ್‌ ಶಮಿ ಒಂದು ವಿಕೆಟ್‌ ಪಡೆದರು. 

Similar News