ಬಿಹಾರ: ಛತ್ ಪೂಜೆಯ ವೇಳೆ ಭಾರೀ ಅಗ್ನಿ ಅವಘಡ, ಹಲವರಿಗೆ ಗಂಭೀರ ಗಾಯ
Update: 2022-10-29 10:08 IST
ಔರಂಗಾಬಾದ್(ಬಿಹಾರ): ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ ಗ್ಯಾಸ್ ಸಿಲಿಂಡರ್ ವೊಂದು ಸ್ಫೋಟಗೊಂಡಿದ್ದು, 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನಿಷ್ಠ ಹತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ.
ಬೆಳಗಿನ ಜಾವ 2:30ಕ್ಕೆ ಕುಟುಂಬವೊಂದು ಛತ್ ಪೂಜೆಗೆ ಅಡುಗೆ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬೆಂಕಿ ನಂದಿಸುವ ಪ್ರಯತ್ನದಲ್ಲಿ ಏಳು ಮಂದಿ ಪೊಲೀಸ್ ಸಿಬ್ಬಂದಿಗೂ ಸುಟ್ಟ ಗಾಯಗಳಾಗಿವೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಹಗಂಜ್ ಪ್ರದೇಶದಲ್ಲಿ ರವಿವಾರ ಬೆಳಗಿನ ಜಾವ ಅನಿಲ್ ಗೋಸ್ವಾಮಿ ಅವರ ಕುಟುಂಬ ಸದಸ್ಯರು ಛತ್ ಪೂಜೆಗಾಗಿ ಪ್ರಸಾದವನ್ನು ತಯಾರಿಸುತ್ತಿದ್ದಾಗ ಕೆಲವು ಗ್ಯಾಸ್ ಸಿಲಿಂಡರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದು ಅನಿಲ ಸೋರಿಕೆಗೆ ಹಾಗೂ ಭಾರಿ ಬೆಂಕಿಗೆ ಕಾರಣವಾಯಿತು, ಅದನ್ನು ನಂದಿಸಲು ಸ್ಥಳೀಯರು ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅದು ತೀವ್ರಗೊಂಡಿತು.