×
Ad

ತೆಲಂಗಾಣ: ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯದಲ್ಲಿ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

Update: 2022-10-29 10:57 IST

ಹೈದರಾಬಾದ್: ತೆಲಂಗಾಣದ ಧರ್ಮಪುರದಿಂದ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯದಲ್ಲಿ Rahul Gandhi joins tribal dancers ಪಾಲ್ಗೊಂಡರು.

ಕಾಂಗ್ರೆಸ್ ಸಂಸದ ರಾಹುಲ್  ಬುಡಕಟ್ಟು ಜನಾಂಗದವರ ಶಿರಸ್ತ್ರಾಣವನ್ನು ಧರಿಸಿ ಆದಿವಾಸಿಗಳೊಂದಿಗೆ ನೃತ್ಯ ಮಾಡಿದರು.

ಇದಕ್ಕೂ ಮುನ್ನ, 3 ದಿನಗಳ ದೀಪಾವಳಿ ವಿರಾಮದ ನಂತರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯಿಂದ ತಮ್ಮ ಯಾತ್ರೆ ಮುಂದುವರಿಸಿದ ರಾಹುಲ್ ಗಾಂಧಿ ಸ್ಥಳೀಯ ಕಲಾವಿದರೊಂದಿಗೆ ಧೋಲ್ ನುಡಿಸಿದರು.  ಮಾಜಿ ಕಾಂಗ್ರೆಸ್ ಅಧ್ಯಕ್ಷರು ಬುಡಕಟ್ಟು ಸಂಗೀತದ ಟ್ಯೂನ್‌ಗೆ ನೃತ್ಯ ಮಾಡಿದ್ದು ಇದೇ ಮೊದಲಲ್ಲ. 2019ರಲ್ಲಿ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 27 ರಂದು 50 ದಿನಗಳನ್ನು ಪೂರೈಸಿದೆ.

Similar News