×
Ad

ಟ್ವಿಟ್ಟರ್ ವಿಷಯ ನಿಯಂತ್ರಣ ಮಂಡಳಿ ರಚಿಸುವುದಾಗಿ ಹೇಳಿದ ಎಲಾನ್ ಮಸ್ಕ್

Update: 2022-10-29 14:15 IST

ಕ್ಯಾಲಿಫೋರ್ನಿಯಾ: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ತಾವು ವೈವಿಧ್ಯಮಯ ದೃಷ್ಟಿಕೋನಗಳುಳ್ಳ ವಿಷಯ ನಿಯಂತ್ರಣ ಮಂಡಳಿಯೊಂದನ್ನು ರಚಿಸುವುದಾಗಿ ಘೋಷಿಸಿದ್ದಾರೆ.

"ಈ ಸಮಿತಿ ಸಭೆ ಸೇರಿ ಚರ್ಚೆ ನಡಸುವ ಮುನ್ನ ಯಾವುದೇ ವಿಷಯ ಸಂಬಂಧಿತ ಪ್ರಮುಖ ನಿರ್ಧಾರಗಳು ಅಥವಾ ರದ್ದಾದ ಖಾತೆಗಳ ಮರುಸ್ಥಾಪನೆ ನಡೆಯದು" ಎಂದು ಮಸ್ಕ್ ಹೇಳಿದರಲ್ಲದೆ ಸದ್ಯ ವಿಷಯ ನಿಯಂತ್ರಣ ನೀತಿಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದರು.

ಟ್ವಿಟ್ಟರ್ ಖರೀದಿ ಸಂಬಂಧ 44  ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶುಕ್ರವಾರ ಟ್ವೀಟ್ ಮಾಡಿದ ಮಸ್ಕ್, "ಹಕ್ಕಿಯನ್ನು ಸ್ವತಂತ್ರಗೊಳಿಸಲಾಗಿದೆ,'' ಎಂದು ಟ್ವಿಟ್ಟರ್‍ನ ಐಕಾನ್ ಉಲ್ಲೇಖಿಸಿ ಹೇಳಿದರು.

Similar News