×
Ad

ಸ್ತನ ಕ್ಯಾನ್ಸರ್ ಗೆ ಹೊಸ ಥೆರಪಿ: ಶೇ 70-90 ರಷ್ಟು ಚಿಕಿತ್ಸೆ ಸಮಯ ಉಳಿತಾಯ

Update: 2022-10-29 14:19 IST

 ಹೊಸದಿಲ್ಲಿ: ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿರುವ ಆಧುನಿಕ ಹಾಗೂ ಹೊಸ ಥೆರಪಿಗಳು ಈಗ ವೈದ್ಯರ ಹಾಗೂ ರೋಗಿಗಳ ಶೇ 70 ರಿಂದ ಶೇ 90 ರಷ್ಟು ಸಮಯ ಉಳಿತಾಯ ಮಾಡುತ್ತಿದೆ.

ಸ್ತನ ಕ್ಯಾನ್ಸರ್‍ಗೆ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನ ಫೆಸ್ಗೋ ಇತ್ತೀಚೆಗೆ ಭಾರತದಲ್ಲಿ  ಲಭ್ಯವಾಗಿದ್ದು ಕ್ಯಾನ್ಸರ್ ತಜ್ಞರಿಗೆ ಚಿಕಿತ್ಸೆಯ ವೇಳೆ ಸಮಯ ಉಳಿಸುವುದರ ಜೊತೆಗೆ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆ.

ಮಹಿಳೆಯರಲ್ಲಿ ಕಾಣಿಸುವ ವಿವಿಧ ರೀತಿಯ ಕ್ಯಾನ್ಸರ್‍ಗಳಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ಸ್ತನ ಕ್ಯಾನ್ಸರ್ ಪ್ರಕರಣಗಳಾಗಿದ್ದು ಇದೀಗ ಈ ಕ್ಯಾನ್ಸರ್ ಚಿಕಿತ್ಸಾ ವೆಚ್ಚವೂ ಶೇ 20 ರಷ್ಟು ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದೆ. ರೋಗ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಯಾದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಔಷಧಿಗಳ ಲಭ್ಯತೆಯಿಂದಾಗಿ ಜೀವವುಳಿಸುವ ಸಾಧ್ಯತೆಗಳೂ ಅಧಿಕವಾಗಿವೆ.

ಭಾರತದಲ್ಲಿ ಪ್ರತಿ ವರ್ಷ 1.8 ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ದಿಲ್ಲಿಯ ಸರ್ ಗಂಗಾರಾಂ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ ಶ್ಯಾಮ್ ಅಗರ್ವಾಲ್ ಹೇಳುತ್ತಾರೆ.

ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿರುವ ಹೊಸ ಥೆರಪಿಗಳು  ಮುಂದುವರಿದ ಹಂತದ  ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವುದರ ಜೊತೆಗೆ ಆರಂಭಿಕ ಹಂತದ ಕ್ಯಾನ್ಸರ್ ಚಿಕಿತ್ಸೆಗೂ ನಿರ್ಣಾಯಕವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.

Similar News