ಭಾರತ್ ಜೋಡೋ ಯಾತ್ರೆಯ ವೇಳೆ ಶಾಲಾ ಮಕ್ಕಳೊಂದಿಗೆ ಓಡಲು ಆರಂಭಿಸಿದ ರಾಹುಲ್ ಗಾಂಧಿ

Update: 2022-10-30 05:41 GMT

ಜಡ್ಚೆರ್ಲಾ,(ತೆಲಂಗಾಣ): ಪಕ್ಷದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ರವಿವಾರದಂದು ಪಾದಯಾತ್ರೆಯ ಸಮಯದಲ್ಲಿ ಕೆಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾದರು. ರಾಹುಲ್ ಅವರು ಇದ್ದಕ್ಕಿದ್ದಂತೆ ಕೆಲವು ಶಾಲಾ ಮಕ್ಕಳೊಂದಿಗೆ ಓಡಲು ಆರಂಭಿಸಿದರು, ಇತರರನ್ನು ಓಡುವಂತೆ ಪ್ರೇರೇಪಿಸಿದರು.

ರಾಹುಲ್ ಅವರು ಹಠಾತ್ ನಡಿಗೆಯ ಬದಲು ಓಡಲು ಆರಂಭಿಸಿದಾಗ ಅವರ ಭದ್ರತಾ ಸಿಬ್ಬಂದಿ, ತೆಲಂಗಾಣ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಇತರರು ಕೂಡ ಚುರುಕಾದ ನಡಿಗೆಯಿಂದ ಓಟವನ್ನು ಆರಂಭಿಸಿದರು.

ಪಕ್ಷದ ಮುಖಂಡರು ಹಾಗೂ  ಕಾರ್ಯಕರ್ತರೊಂದಿಗೆ ಸೇರಿಕೊಂಡು ರಾಹುಲ್ ಗಾಂಧಿ ಅವರು ರವಿವಾರ ಬೆಳಿಗ್ಗೆ ಇಲ್ಲಿಂದ ತಮ್ಮ ಪಾದಯಾತ್ರೆಯನ್ನು ಆರಂಭಿಸಿದರು. ಇದು 22 ಕಿಮೀ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಐದನೇ ದಿನ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಸಂಜೆ ಶಾದ್‌ನಗರದ ಸೋಲಿಪುರ್ ಜಂಕ್ಷನ್‌ನಲ್ಲಿ ಕಾರ್ನರ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಶನಿವಾರದಂದು 20 ಕಿ.ಮೀ.ಗೂ ಹೆಚ್ಚು ದೂರವನ್ನು ಪೂರ್ಣಗೊಳಿಸಿದ ರಾಹುಲ್ ಅವರ  ಯಾತ್ರೆ ರಾತ್ರಿ ಜಡ್ಚೆರ್ಲಾ ಎಕ್ಸ್ ರೋಡ್ ಜಂಕ್ಷನ್‌ನಲ್ಲಿ ನಿಂತಿತು.

Similar News