ಗುಜರಾತ್ ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಯೋಜನೆ: ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ಹೀಗೆ

ಉತ್ತರಾಖಂಡ ಚುನಾವಣೆಯಲ್ಲಿ ಇದೇ ಭರವಸೆ ನೀಡಲಾಗಿದ್ದು, ಅಲ್ಲಿ ಕಾರ್ಯಗತವಾಗಿಲ್ಲ

Update: 2022-10-30 10:34 GMT

ಹೊಸದಿಲ್ಲಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಬಿಜೆಪಿ ಬೊಬ್ಬಿಡುತ್ತಿದೆ ಎಂದು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್‌ನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ  ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ Delhi Chief Minister and Aam Aadmi Party chief Arvind Kejriwal ಅವರು ಇಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೇಜ್ರಿವಾಲ್ , ಆಡಳಿತ ಪಕ್ಷವು ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅದೇ ಭರವಸೆಯನ್ನು ನೀಡಿತ್ತು.  ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಅದನ್ನು ಕಾರ್ಯಗತಗೊಳಿಸಲಿಲ್ಲ ಎಂದು ಹೇಳಿದರು.

"ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದ ನಂತರ ಅವರು ಸಮಿತಿಯನ್ನು ರಚಿಸಿದರು, ಆದರೆ ನಂತರ ಅವರು ಮನೆಗೆ ಮರಳಿದರು.  ಈಗ "ಗುಜರಾತ್ ಚುನಾವಣೆಗೆ ಕೆಲವೇ  ದಿನಗಳ ಮೊದಲು" ಸಮಿತಿಯನ್ನು ರಚಿಸಿದ್ದಾರೆ, ಅದು ಚುನಾವಣೆಯ ನಂತರ "ಮನೆಗೆ ಹೋಗಲಿದೆ" ಎಂದು ಅವರು ಹೇಳಿದರು.

ಭಾವನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕೇಜ್ರಿವಾಲ್ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಮಾಡಬೇಕು. , ಸಂವಿಧಾನದ 44 ನೇ ವಿಧಿಯು ಹಾಗೆ ಮಾಡುವುದು ಸರಕಾರದ ಜವಾಬ್ದಾರಿ ಎಂದು ಸ್ಪಷ್ಟವಾಗಿ ಹೇಳುತ್ತದೆ.  ಆದರೆ ಎಲ್ಲಾ ಸಮುದಾಯಗಳೊಂದಿಗೆ ಸಮಾಲೋಚನೆ ಒಪ್ಪಿಗೆಯೊಂದಿಗೆ ಅದನ್ನು ಮಾಡಬೇಕು ಎಂದು ಹೇಳಿದರು.

ಮಧ್ಯಪ್ರದೇಶ ಹಾಗೂ  ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದನ್ನು ಏಕೆ ಜಾರಿಗೊಳಿಸುವುದಿಲ್ಲ. ಸಂಹಿತೆಯನ್ನು ದೇಶಾದ್ಯಂತ ಏಕೆ ಜಾರಿಗೆ ತರುತ್ತಿಲ್ಲ. ಅವರು ಲೋಕಸಭೆ ಚುನಾವಣೆಗೆ ಕಾಯುತ್ತಿದ್ದಾರೆಯೇ? ಎಂದು ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಗುಜರಾತ್ ನಲ್ಲೂ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸಲು ಯೋಜಿಸಲಾಗುತ್ತಿದೆ ಎಂದು ಬಿಜೆಪಿ ಶನಿವಾರ ಹೇಳಿದೆ. ಈ ಸಂಹಿತೆಯು ಧರ್ಮ ಆಧಾರಿತ ಕಾನೂನುಗಳನ್ನು ತೆಗೆದುಹಾಕುತ್ತದೆ.

Similar News