ಬಲಪಂಥೀಯರಿಂದ ಮತ್ತೊಂದು ಸಂಸ್ಥೆ ಬಹಿಷ್ಕಾರಕ್ಕೆ ಅಭಿಯಾನ: ಈ ಬಾರಿ ʼಕ್ಯಾಡ್ಬರಿʼ ಗುರಿ.!

Update: 2022-10-30 12:46 GMT

ಹೊಸದಿಲ್ಲಿ: ಚಾಕೊಲೇಟ್‌ ಕಂಪೆನಿ ಕ್ಯಾಡ್ಬರಿಯ ವಿರುದ್ಧ ಮತ್ತೆ ಬಲಪಂಥೀಯರಿಂದ ಬಹಿಷ್ಕಾರ ಆಭಿಯಾನ ಆರಂಭವಾಗಿದೆ. ಕ್ಯಾಡ್ಬರಿ ತಮ್ಮ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ ಅನ್ನು "ಗೋಮಾಂಸದಿಂದ ಪಡೆಯಲಾಗಿದೆ" ಎಂಬ ಹೇಳಿಕೆಗಳ ಮೇಲೆ ರವಿವಾರ ಬಹಿಷ್ಕಾರದ ಕೂಗು ಕೇಳಿಬಂದಿದೆ. ಇದು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದವರು ಆರೋಪಿಸಿದ್ದಾರೆ.

ಆ ಮೂಲಕ ಬಲಪಂಥೀಯರಿಂದ ಬಹಿಷ್ಕಾರಕ್ಕೆ ಕರೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಕ್ಯಾಡ್ಬರಿಯು ಸೇರಿದೆ. ಹಿಂದೂ ಭಾವನೆಗಳಿಗೆ ಘಾಸಿಯಾಗಿದೆ ಎಂದು ಆರೋಪಿಸಿ ಹಲವುಚಲನಚಿತ್ರಗಳು, ಸೆಲೆಬ್ರಿಟಿಗಳು, ಬಟ್ಟೆ ಬ್ರ್ಯಾಂಡ್‌ಗಳು, ಜಾಹೀರಾತುಗಳು ಇತ್ತೀಚಿನ ದಿನಗಳಲ್ಲಿ ಬಹಿಷ್ಕಾರ ಅಭಿಯಾನಕ್ಕೆ ಒಳಗಾಗಿವೆ. 

ಕ್ಯಾಡ್ಬರಿಯ ವೆಬ್‌ಪುಟ ಎಂದು ಹೇಳಲಾದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ತಮ್ಮ  ಅದು ತಮ್ಮ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ "ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ" ಎಂದು ಉಲ್ಲೇಖಿಸಿದೆ.

Ndtv.com ವರದಿ ಪ್ರಕಾರ ಸದ್ಯ ವೈರಲ್‌ ಆಗುತ್ತಿರುವ ಸ್ಕ್ರೀನ್‌ ಶಾಟ್‌ ಹಳೆಯ ಸ್ಕ್ರೀನ್‌ ಶಾಟ್‌ ಆಗಿದ್ದು, ಅದು ಆಸ್ಟ್ರೇಲಿಯನ್‌ ಆವೃತ್ತಿಯ ವೆಬ್‌ಪುಟ ಎಂದು ತಿಳಿದು ಬಂದಿದೆ.

Similar News