×
Ad

ಭಾರತದ 'ಉಕ್ಕಿನ ಮನುಷ್ಯ' ಎಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ. ಇರಾನಿ ನಿಧನ

Update: 2022-11-01 11:12 IST

ಹೊಸದಿಲ್ಲಿ: ಭಾರತದ “ಉಕ್ಕಿನ ಮನುಷ್ಯ’’ ಎಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ. ಇರಾನಿ (JJ Irani) ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

"ಭಾರತದ ಉಕ್ಕಿನ ಮನುಷ್ಯ ನಿಧನರಾಗಿದ್ದಾರೆ. ಪದ್ಮಭೂಷಣ ಡಾ.  ಜಮ್ಶೆಡ್ ಜೆ ಇರಾನಿ ಅವರ ನಿಧನದ ಬಗ್ಗೆ ಟಾಟಾ ಸ್ಟೀಲ್ ತೀವ್ರ ದುಃಖದಿಂದ ವರದಿ ಮಾಡುತ್ತಿದೆ" ಎಂದು ಟಾಟಾ ಸ್ಟೀಲ್ ಹೇಳಿಕೆಯಲ್ಲಿ ತಿಳಿಸಿದೆ.

ಜೆಜೆ ಇರಾನಿ ಅವರು ಅಕ್ಟೋಬರ್ 31ರಂದು ರಾತ್ರಿ 10 ಗಂಟೆಗೆ ಜೆಮ್‌ಶೆಡ್‌ಪುರದ TMH (ಟಾಟಾ ಆಸ್ಪತ್ರೆ) ನಲ್ಲಿ ನಿಧನರಾದರು ಎಂದು ಅದು ಹೇಳಿದೆ.

ಇರಾನಿ ಅವರು ಜೂನ್ 2011 ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾದರು. 1968ರಲ್ಲಿ ಟಾಟಾ ಕಂಪೆನಿ ಸೇರಿದ್ದ  ಇರಾನಿ ಅವರು ತಮ್ಮ43 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿತ್ತು.

ಜೂನ್ 2, 1936 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಡಾ. ಇರಾನಿ ಅವರು 1956 ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಹಾಗೂ  1958 ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದರು.

Similar News