ಬೆದರಿಕೆಯ ನಂತರ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಲು ಮಹಾರಾಷ್ಟ್ರ ಸರಕಾರ ನಿರ್ಧಾರ

Update: 2022-11-01 08:57 GMT

ಮುಂಬೈ: ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ನಟ ಸಲ್ಮಾನ್ ಖಾನ್ actor Salman Khan  ಅವರಿಗೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಲ್ಮಾನ್ ರಿಗೆ Y+ ದರ್ಜೆಯ ಭದ್ರತೆಯನ್ನು ಒದಗಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಅಂದರೆ ಒಬ್ಬ ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ ಪೊಲೀಸ್ ಸಿಬ್ಬಂದಿ ಸಲ್ಮಾನ್ ಗೆ ಭದ್ರತೆ ಒದಗಿಸಲಿದ್ದಾರೆ.

ಸದ್ಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಬೆಂಬಲಿತ ವ್ಯಕ್ತಿಗಳು ಪಂಜಾಬಿನ ಮಾನ್ಸಾ ಜಿಲ್ಲೆಯ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಕೊಂದ ಎರಡು ತಿಂಗಳ ನಂತರ ಜುಲೈನಲ್ಲಿ ಸಲ್ಮಾನ್ ಗೆ ಬೆದರಿಕೆ ಬಂದಿತು.

ಸಲ್ಮಾನ್ ಖಾನ್ ಅವರ ತಂದೆ, ಬರಹಗಾರ ಸಲೀಂ ಖಾನ್ ಅವರು ತಮ್ಮ ಸಾಮಾನ್ಯ ಬೆಳಗಿನ ನಡಿಗೆಯ ನಂತರ ಅವರು ಕುಳಿತಿದ್ದ ಬೆಂಚ್ ಮೇಲೆ ಯಾರೋ ಬಿಟ್ಟುಹೋದ ಬೆದರಿಕೆ ಪತ್ರವೊಂದು ಸಿಕ್ಕಿತ್ತು .

ಬೆದರಿಕೆ ಗ್ರಹಿಕೆ ಪರಿಶೀಲನೆಯ ನಂತರ ಸಲ್ಮಾನ್ ಖಾನ್‌ಗೆ ಭಾರತದಲ್ಲಿ ಒದಗಿಸಲಾಗುವ  ನಾಲ್ಕನೇ ಅತ್ಯುನ್ನತ ದರ್ಜೆಯ ಭದ್ರತೆ 'ವೈ ಪ್ಲಸ್' ಅನ್ನು ನೀಡಲು ರಾಜ್ಯದ ಗೃಹ ಇಲಾಖೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರಕಾರವು ಹೇಳಿದೆ.

Similar News