×
Ad

ಮಲ್ಪೆಯಲ್ಲಿ ರಿಕ್ಷಾ ಚಾಲಕರಿಂದ ಕನ್ನಡಾಂಬೆಯ ಮೆರವಣಿಗೆ

Update: 2022-11-01 19:38 IST

ಮಲ್ಪೆ, ನ.1: ಕನ್ನಡ ನಾಡಿನ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಪರಿಸ್ಥಿತಿಯನ್ನು ಚಿಂತಿಸುವ ಸರಕಾರ ಈ ನೆಲದ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಕನ್ನಡ ಅನ್ನ ನೀಡುವ ಭಾಷೆಯಾಗಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಮಲ್ಪೆಕಡಲ ತೀರದಲ್ಲಿ ರಿಕ್ಷಾ ಮಾಲಕ ಚಾಲಕರ ಸಂಘ ಆಯೋಜಿಸಿದ 67ನೇ ಕನ್ನಡ ರಾಜ್ಯೋತ್ಸವದ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ರಿಕ್ಷಾ ಮಾಲಕರ ಚಾಲಕರ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮಾಜಿ ನಗರಸಬಾ ಸದಸ್ಯ ಪಾಂಡುರಂಗ ಮಲ್ಪೆ, ಸಮಾಜ ಸೇವಕ ಮಂಜು ಕೊಳ, ಮಲ್ಪೆಠಾಣೆಯ ಉಪನಿರೀಕ್ಷಕ ಶಕ್ತಿವೇಲು, ಐತ್ತಪ್ಪ ಬಂಗೇರ, ಚಂದ್ರಹಾಸ್ ಮಲ್ಪೆ, ಪ್ರಕಾಶ್ ಎಂ.ಕಲ್ಮಾಡಿ, ಶಾರದ ನೆರ್ಗಿ ಮತ್ತು ಗಣೇಶ್ ನೆರ್ಗಿ ಉಪಸ್ಥಿತರಿದ್ದರು.

ಮಲ್ಪೆ ಕಡಲ ತೀರದ ಬೀಚ್‌ನಿಂದ ಕನ್ನಡಾಂಬೆಯ ಭಾವಚಿತ್ರದ ಜೊತೆ ಸುಮಾರು ಐನೂರಕ್ಕೂ ಹೆಚ್ಚು ರಿಕ್ಷಾಗಳು ಕನ್ನಡದ ಬಾವುಟಗಳ ಜೊತೆ ವಡಬಾಂಡೇಶ್ವರ, ಕೋರನೇಟ್ ಮೂಲಕ ಮಲ್ಪೆಯ ಹೃದಯ ಭಾಗವಾಗಿ ಕೊಳ ಮೂಲಕ ಮೆರವಣಿಗೆ ನಡೆಸಿದವು.

Similar News