ಟರ್ಕಿ: ವಿಮೆ ಹಣಕ್ಕಾಗಿ ಪತ್ನಿಯಹತ್ಯೆಗೈದವನಿಗೆ 30 ವರ್ಷ ಜೈಲು

Update: 2022-11-02 17:30 GMT

ಅಂಕಾರ, ನ.2: ಜೀವವಿಮೆ(life insurance)ಯ ಹಣ ಪಡೆಯಲು ತನ್ನ ಪತ್ನಿಯನ್ನು 1000 ಅಡಿ ಆಳದ ಕಂದಕಕ್ಕೆ ದೂಡಿ ಹತ್ಯೆಗೈದ ವ್ಯಕ್ತಿಗೆ ಟರ್ಕಿಯ ನ್ಯಾಯಾಲಯ 30 ವರ್ಷದ ಜೈಲುಶಿಕ್ಷೆ ವಿಧಿಸಿದೆ. ಹಕನ್ ಅಯ್ಸಾಲ್ (Hakan Aysal)ಎಂಬಾತ 2018ರ ಜೂನ್ನಲ್ಲಿ ತನ್ನ ಪತ್ನಿ, 7 ತಿಂಗಳ ಗರ್ಭಿಣಿ ಸೆಮ್ರಾ ಅಯ್ಸಾಲ್ಳ(Semra Aysalla)ನ್ನು ಬಟರ್ಫ್ಲೈ ಕಣಿವೆಗೆ ಕರೆದೊಯ್ದು, ಅಲ್ಲಿ ಆಕೆಯ ಜೊತೆ ಸೆಲ್ಫೀ ತೆಗೆಸಿಕೊಂಡು ಆಕೆಯನ್ನು ಕಣಿವೆಗೆ ದೂಡಿದ್ದ. ಪತ್ನಿ ಕಾಲುಜಾರಿ ಬಿದ್ದಳೆಂದು ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ತಿಳಿಸಿ, ಆಕೆಯ ಹೆಸರಲ್ಲಿದ್ದ 25,000 ಡಾಲರ್ ಮೊತ್ತದ ಜೀವವಿೆು ಹಣ ಪಡೆಯಲು ಅರ್ಜಿ ಸಲ್ಲಿಸಿದ್ದ.

ಆದರೆ ಈ ಹಂತದಲ್ಲಿ ಅಧಿಕಾರಿಗಳಿಗೆ ಅನುಮಾನ ಬಂದು ಹೆಚ್ಚಿನ ವಿಚಾರಣೆ ನಡೆಸಿದಾಗ, ಮತ್ತು ಸೆಮ್ರಾ ಅಯ್ಸಾಲ್ ಮೃತಪಟ್ಟ ಸಂದರ್ಭ ಸಮೀಪದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಹಕನ್ನ ಅಪರಾಧ ಸಾಬೀತಾಗಿದ್ದು 30 ವರ್ಷ ಜೈಲುಶಿಕ್ಷೆಗೆ ಒಳಗಾಗಿದ್ದಾನೆ.

Similar News