ಶೂಟರ್ ನನ್ನು ಹಿಡಿದು ಇಮ್ರಾನ್‌ ಖಾನ್‌ 'ಜೀವ ಉಳಿಸಿದ' ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ

Update: 2022-11-03 16:44 GMT

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಿದ ಘಟನೆಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಅದರಲ್ಲೂ ಇಮ್ರಾನ್‌ ಅಭಿಮಾನಿಗಳಿಗೆ ಆಘಾತ ಉಂಟಾಗಿದ್ದು, ಘಟನೆಯನ್ನು ಖಂಡಿಸುತ್ತಿದ್ದಾರೆ. ಈ ನಡುವೆ, ಗುಂಡಿನ ದಾಳಿ ನಡೆಸಿದ ಶೂಟರ್‌ನನ್ನು ಹಿಡಿದ ಯುವಕನ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶೂಟರ್‌ನನ್ನು ತಡೆದ ಯುವಕನನ್ನು 'ಪಾಕಿಸ್ತಾನದ ಹೀರೋ' ಎಂದು ಇಮ್ರಾನ್ ಖಾನ್ ಬೆಂಬಲಿಗರ ಸಹಿತ ಹಲವರು ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಲು ತೊಡಗುತ್ತಿದ್ದಂತೆಯೇ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್‌ ಖಾನ್ ಕಾಲಿಗೆ ಗುಂಡೇಟು ತಗುಲಿದೆ. ತಕ್ಷಣವೇ ಅಲ್ಲಿದ್ದ ಪಿಟಿಐ ಪಕ್ಷದ (ಇಮ್ರಾನ್‌ ಪಕ್ಷದ) ಕಾರ್ಯಕರ್ತ ಬಂದೂಕುಧಾರಿಯನ್ನು ಹಿಡಿದುಕೊಂಡಿದ್ದು, ಇಮ್ರಾನ್‌ ಖಾನ್‌ ಜೀವ ಉಳಿಸಿದ್ದಾನೆ. ಇಮ್ರಾನ್‌ ಖಾನ್‌ ರ ಜೀವ ಉಳಿಸಿದ ಯುವಕನನ್ನು ಇಬ್ತೆಶಾಮ್‌ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೋ ಈಗ ಹೊರಬಿದ್ದಿದೆ. 

ನೂರಾರು ಪಾಕ್‌ ಟ್ವಿಟ್ಟರಿಗರು ಇಬ್ತಿಶಾಮ್‌ ಗೆ ಧನ್ಯವಾದ ತಿಳಿಸಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಶೂಟರ್!

Similar News