ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

Update: 2022-11-04 14:45 GMT

ಹೊಸದಿಲ್ಲಿ: ಪ್ರಮುಖ ಆನ್ ಲೈನ್ ಶಿಕ್ಷಣ ಸಂಸ್ಥೆ ಬೈಜುಸ್ ತನ್ನ ಸಾಮಾಜಿಕ ಕಳಕಳಿಯ “ಎಲ್ಲರಿಗೂ ಶಿಕ್ಷಣ”ದ( ಎಜುಕೇಶನ್ ಫಾರ್ ಆಲ್‌’’ನ) ಮೊದಲ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ "ಲಿಯೋ" ಮೆಸ್ಸಿಯನ್ನು (Lionel Messi) ನೇಮಿಸಿಕೊಂಡಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ಪ್ಯಾರಿಸ್ ಸೇಂಟ್-ಜರ್ಮೈನ್‌ಗಾಗಿ ಆಡುತ್ತಿರುವ ಹಾಗೂ  ಅರ್ಜೆಂಟೀನದ ಫುಟ್ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣವನ್ನು ಉತ್ತೇಜಿಸಲು BYJU'S ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು BYJU'S ಹೇಳಿಕೆಯಲ್ಲಿ ತಿಳಿಸಿದೆ.

"ನಮ್ಮ ಜಾಗತಿಕ ರಾಯಭಾರಿಯಾಗಿ ಲಿಯೊನೆಲ್ ಮೆಸ್ಸಿ ಅವರೊಂದಿಗೆ ಸಹಿ ಹಾಕಲು ನಮಗೆ ಗೌರವದ ವಿಚಾರವಾಗಿದ್ದು, ಆ ನಿಟ್ಟಿನಲ್ಲಿ ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಲ್ಲಿ ಒಬ್ಬರಾಗಿದ್ದಾರೆ. BYJU's Education For All (EFA) ಪ್ರಸ್ತುತ 5.5 ಮಿಲಿಯನ್ ಮಕ್ಕಳನ್ನು ಸಶಕ್ತಗೊಳಿಸುತ್ತಿದೆ. ಲಿಯೊನೆಲ್ ಮೆಸ್ಸಿಗಿಂತ ಹೆಚ್ಚು ಮಾನವ ಶಕ್ತಿಯನ್ನು ಯಾರೂ ಪ್ರತಿನಿಧಿಸುವುದಿಲ್ಲ’’ ಎಂದು ಬೈಜುಸ್ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.

ಕತರ್‌ನಲ್ಲಿ ಈ ತಿಂಗಳು ಆರಂಭವಾಗಲಿರುವ FIFA ವಿಶ್ವಕಪ್ 2022 ರ ಅಧಿಕೃತ ಪ್ರಾಯೋಜಕರಾಗಿ ಈ ವರ್ಷದ ಆರಂಭದಲ್ಲಿ, BYJU'S ಸೇರ್ಪಡೆಯಾಗಿತ್ತು.

Similar News