ವಿಮಾನ ಪ್ರಯಾಣ ಮಾಡಿದ ವಿಶ್ವದ ಅತೀ ಎತ್ತರದ ಮಹಿಳೆ

6 ಸೀಟುಗಳನ್ನು ತೆಗೆದು ವಿಶೇಷ ಕೋಣೆ ರಚಿಸಿದ ಏರ್‌ಲೈನ್ ಸಂಸ್ಥೆ

Update: 2022-11-04 18:40 GMT

ಅಂಕಾರ, ನ.4: ವಿಶ್ವದ ಅತೀ ಎತ್ತರದ ಮಹಿಳೆ ಎಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಟರ್ಕಿಯ ರುಮೆಯ್ಸಾ ಗೆಲ್ಗಿ ತನ್ನ ಜೀವನದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಟರ್ಕಿಯ ಇಸ್ತಾನ್‌ಬುಲ್‌ನಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ಟರ್ಕಿ ಏರ್‌ಲೈನ್ ವಿಮಾನದಲ್ಲಿ 13 ಗಂಟೆಯ ಪ್ರಯಾಣದ ಖುಷಿಯನ್ನು ಅವರು   ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 7 ಅಡಿ 7 ಇಂಚು ಎತ್ತರವಿರುವ ಗೆಲ್ಗಿಗೆ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಮಹದಾಸೆಯಿತ್ತು. ಆದ್ದರಿಂದ ಟರ್ಕಿ ಏರ್‌ಲೈನ್ ಸಂಸ್ಥೆ ವಿಮಾನದ 6 ಸೀಟುಗಳನ್ನು ತೆಗೆದು ಅವರಿಗಾಗಿ  ವಿಶೇಷ ಕೋಣೆ ರಚಿಸಿತ್ತು. ಇದಕ್ಕಾಗಿ ಆಕೆ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.

Similar News