ಗುಜರಾತ್: ಮೊರ್ಬಿ ಸೇತುವೆ ದುರಸ್ತಿಗೆ ರೂ. 2 ಕೋಟಿ ಮಂಜೂರಾಗಿದ್ದರೂ ಸಂಸ್ಥೆ ಬಳಸಿದ್ದು ಕೇವಲ ರೂ.12 ಲಕ್ಷ

Update: 2022-11-05 11:47 GMT

ಮೊರ್ಬಿ: ಇತ್ತೀಚೆಗೆ 135ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಮೊರ್ಬಿ ತೂಗುಸೇತುವೆ ಕುಸಿತ (Morbi bridge collapse) ಪ್ರಕರಣದ ತನಿಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಈ 143 ವರ್ಷ ಹಳೆಯದಾದ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿದೆ ಎಂದು ಗುತ್ತಿಗೆ ಸಂಸ್ಥೆ ಒರೆವಾ ಗ್ರೂಪ್‌ ನೀಡಿದ ಹೇಳಿಕೆ ಸುಳ್ಳೆಂದು ಸಾಬೀತಾಗಿದ್ದು ಸೇತುವೆ ದುರಸ್ತಿಗೆಂದು ರೂ. 2 ಕೋಟಿ ನೀಡಲಾಗಿದ್ದರೂ ಸಂಸ್ಥೆ ವ್ಯಯಿಸಿದ್ದು ಕೇವಲ ರೂ. 12 ಲಕ್ಷ ಅಥವಾ ಶೇ. 6 ರಷ್ಟು ಮೊತ್ತವಾಗಿದೆ ಎಂದು ತನಿಖೆ ಕಂಡುಕೊಂಡಿದೆ ಎಂದು timesofindia ವರದಿ ಮಾಡಿದೆ.

ಮೊರ್ಬಿ ನಗರಪಾಲಿಕೆಯಿಂದ ಗುತ್ತಿಗೆ ಪಡೆದಿದ್ದ ಒರೆವಾ ಸಂಸ್ಥೆಯ ಅಧ್ಯಕ್ಷ ಜಯಸುಖ್‌ ಪಟೇಲ್‌ ಅಕ್ಟೋಬರ್‌ 24 ರಂದು ನವೀಕೃತ ಸೇತುವೆ ಉದ್ಘಾಟನೆ ವೇಳೆ ಅದು ಬಹಳ ಸುರಕ್ಷಿತವಾಗಿದೆ ಎಂದಿದ್ದರು.

ಕಾಮಗಾರಿಯ ಗುತ್ತಿಗೆ ಪಡೆದ ನಂತರ ಉಪಗುತ್ತಿಗೆಯನ್ನು ಒರೆವಾ ಗ್ರೂಪ್‌ ನೀಡಿರುವುದೂ ತನಿಖೆ ವೇಳೆ ಬಹಿರಂಗಗೊಂಡಿದೆ.

ಇದನ್ನೂ ಓದಿ: ಗುಜರಾತ್‌ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಫರ್ ನೀಡಿದೆ: ಕೇಜ್ರಿವಾಲ್ ಆರೋಪ

Similar News