×
Ad

ನ.7ರಿಂದ ಉಡುಪಿ ಟೂರಿಸಂ ಕನೆಕ್ಟ್ ಕಾರ್ಯಕ್ರಮ

Update: 2022-11-05 19:01 IST

ಉಡುಪಿ : ಕರಾವಳಿ ಪ್ರವಾಸೋದ್ಯಮ ಸಂಘಟನೆ ವತಿಯಿಂದ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ರಜತಮಹೋತ್ಸವದ ಅಂಗವಾಗಿ ಉಡುಪಿ ಟೂರಿಸಂ ಕನೆಕ್ಟ್-2022 ಎಂಬ ವೈಶಿಷ್ಟ ಪೂರ್ಣ ಕಾರ್ಯಕ್ರಮವನ್ನು  ನ.7ರಿಂದ 9ರವರೆಗೆ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮನೋಹರ್ ಶೆಟ್ಟಿ, ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ದ ಸುಮಾರು 45 ಮಂದಿ ಟ್ರಾವೆಲ್ ಏಜೆಂಟರು, ಬ್ಲಾಗ್ ಬರಹಗಾರರು, ಇವೆಂಟ್ ಸಂಯೋಜಕರು, ಮೈಸ್ ಸಂಯೋಜಕರು, ಪ್ರವಾಸೋದ್ಯಮ ಮಾಧ್ಯಮದ ಸಲಹೆ ಗಾರರು, ಪತ್ರಿಕೋದ್ಯಮಿಗಳು ಭಾಗವ ಹಿಸಲಿರುವರು ಎಂದರು.

ಈ ಶೃಂಗಸಭೆಯ ಪ್ರಯುಕ್ತ ನ.8ರಂದು ಮಧ್ಯಾಹ್ನ 2.30ಕ್ಕೆ ಸಾರ್ವಜನಿಕ ರಿಗಾಗಿ ಮತ್ತು ಪ್ರವಾಸಿ ಪ್ರಿಯರಿಗೆ ಉಡುಪಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಕಾರ್ಯಾಗಾರವನ್ನು ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಇದರಲ್ಲಿ ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ದಕ್ಷಿಣ ಪ್ರಾಂತ್ಯ ನಿರ್ದೇಶಕ ಮುಹಮ್ಮದ್ ಫಾರೂಕ್ ಅವರಿಂದ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ /ಹೋಮ್‌ಸ್ಟೇ ಪ್ರಾರಂಭಿಸುವ ವಿಧಾನ ಮತ್ತು ನಿಯಮಾವಳಿಗಳು, ಕೆನರಾ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜೋಷಿ ಅವರಿಂದ ಉಡುಪಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬ್ಯಾಂಕಿನಿಂದ ಸಿಗುವ ಆರ್ಥಿಕ ಸಹಕಾರ, ಸಿಆರ್‌ಝೆಡ್ ಅಧಿಕಾರಿಗಳಿಂದ ಹೊಸ ಸರಳೀಕೃತ ಸಿಆರ್‌ಝೆಡ್ ನಿಯಮಾವ ಳಿಗಳು ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಉಡುಪಿ ಪ್ರವಾಸೋದ್ಯಮದ ಭವಿಷ್ಯ ಕುರಿತು ಉಪನ್ಯಾಸ ನೀಡ ಲಿರುವರು. ಇದರೊಂದಿಗೆ ಉಡುಪಿ ಪ್ರವಾಸೋದ್ಯಮದ ವಿಶೇಷ ಪ್ರವಾಸ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್, ಕಾರ್ಯ ದರ್ಶಿ ಗೌರವ ಶೆಣವ, ಕೋಶಾಧಿಕಾರಿ ಚಂದ್ರಕಾಂತ್ ಡಿ., ಉದಯ ಶಂಕರ್ ಶೆಣೈ, ವಸಂತ ರಾಜ್ ಉಪಸ್ಥಿತರಿದ್ದರು.

Similar News