ಉಡುಪಿ ಜಯಂಟ್ಸ್ ತಂಡ ವೃದ್ಧಾಶ್ರಮಕ್ಕೆ ಭೇಟಿ
Update: 2022-11-05 19:48 IST
ಉಡುಪಿ, ನ.5: ಉಡುಪಿ ಜಯಂಟ್ಸ್ ಗ್ರೂಪ್ ತಂಡವು ಕಾಡಬೆಟ್ಟುವಿನಲ್ಲಿರುವ ಬೆಳಕು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆಶ್ರಮ ನಿವಾಸಿಗಳಿಗೆ ಮಧ್ಯಾಹ್ನದ ಊಟ, ಉಡುಗೆ ಸಾಮಗ್ರಿಗಳು ಮತ್ತು ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆಯಿತು.
ಜಯಂಟ್ಸ್ ಉಡುಪಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಜಯಂಟ್ಸ್ ಉಡುಪಿಯ ನಿರಂತರ ಸಹಾಯಹಸ್ತ ಮತ್ತು ಉದಾತ್ತ ಚಟುವಟಿಕೆಗಳಿಗೆ ಕೈಜೋಡಿಸುತ್ತಿರುವ ಪ್ರಾಯೋಜಕರನ್ನು ಶ್ಲಾಘಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಸತೀಶ್ ಬೀಡು, ಶ್ರೀಲತಾ, ಪ್ರಗತಿ, ಪ್ರಣಿತಾ ಮೊದಲಾದವರು ಉಪಸ್ಥಿತರಿದ್ದರು.