ಟಿಬೆಟ್-ಕ್ಸಿನ್ಜಿಯಾಂಗ್ ಹೆದ್ದಾರಿ ಸೇತುವೆಗಳಿಗೆ ಗಲ್ವಾನ್ ಘರ್ಷಣೆಯಲ್ಲಿ ಮೃತಪಟ್ಟ ತನ್ನ ಯೋಧರ ಹೆಸರನ್ನಿಟ್ಟ ಚೀನಾ

Update: 2022-11-05 15:45 GMT

ಹೊಸದಿಲ್ಲಿ,ನ.5: ಅಕ್ಸಾಯಿಚಿನ್(Oxychin) ಪ್ರದೇಶದಲ್ಲಿ ಹಾದುಹೋಗುವ ಟಿಬೆಟ್-ಕ್ಸಿನ್ಜಿಯಾಂಗ್(Tibet-Xinjiang) ಹೆದ್ದಾರಿಯಲ್ಲಿರುವ  11 ಸೇತುವೆಗಳಿಗೆ 2020ರ ಗಲ್ವಾನ್ ಕಣಿವೆ(Galvan Valley) ಘರ್ಷಣೆಯಲ್ಲಿ  ಮೃತಪಟ್ಟ ನಾಲ್ವರು ಚೀನಿ ಸೈನಿಕರ  ಹೆಸರುಗಳನ್ನಿರಿಸಲಾಗಿದೆಯೆಂದು, ಚೀನಾ ಸರಕಾರದ ಮುಖವಾಣಿ ‘ದಿ ಗ್ಲೋಬಲ್ ಟೈಮ್ಸ್’ (The Global Times)ವರದಿ ಮಾಡಿದೆ.

ಅಕ್ಸಾಯಿಚಿನ್ ಪ್ರದೇಶವು  ಚೀನಾ ನಿಯಂತ್ರಣದಲ್ಲಿರುವ ವಿವಾದಿತ ಪ್ರದೇಶವಾಗಿದೆ. ಆದರೆ ಭಾರತವು ಇದು ಲಡಾಕ್ನ ಭಾಗವೆಂದು ಪ್ರತಿಪಾದಿಸುತ್ತಿದೆ.

‘‘ಚೀನಿ ಜನತೆಯಲ್ಲಿ ಬೆಳೆಯುತ್ತಿರುವ ದೇಶಭಕ್ತಿಯ ಭಾವನೆಗಳ ಪ್ರತೀಕವಾದ ಈ ಯೋಧರ ಸ್ಮರಣಾರ್ಥ ಈ ಸೇತುವೆಮಾರ್ಗಗಳಿಗೆ ಅವರ ಹೆಸರುಗಳನ್ನಿಡಲಾಗಿದೆ ’’ ಗ್ಲೋಬಲ್ ಟೈಮ್ಸ್ ತಿಳಿಸಿದೆ. ಗಲ್ವಾನ್ ಘರ್ಷಣೆಯಲ್ಲಿ ಮಡಿದ ಚೀನಿ ಯೋಧರಾದ ಚೆನ್ ಕ್ಸಿಯಾನ್ಗೊಂಗ್, ಕ್ಸಿಯಾವೊ ಸಿಯುವಾನ್, ವಾಂಗ್ ರೊರಾನ್ ಹಾಗೂ ಚೆನ್ ಹೊಂಗ್ಜುನ್  ಅವರ ಹೆಸರುಗಳನ್ನು  ಅಕ್ಸಾಯಿಚಿನ್ ಸೇತುವೆಗಳಿಗಿಡಲಾಗಿದೆ ಎಂದು ‘ ದಿ ಹಿಂದೂ’’ ("The Hindu")ಸುದ್ದಿಸಂಸ್ಥೆ ವರದಿ ಮಾಡಿದೆ.

2020ರ ಜೂನ್ನಲ್ಲಿ ಪೂರ್ವ ಲಡಾಕ್ನಲ್ಲಿರುವ ಗಲ್ವಾನ್ ಕಣಿವೆಯಲ್ಲಿ   ಸೇನಾ ಉದ್ವಿಗ್ನತೆಯಿದ್ದಾಗ ಉಭಯ ಸೈನಿಕರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗ್ದಿರು. ಆದರೆ ತನ್ನ ಡೆಯ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆಂದು ಚೀನಾ  ಹೇಳಿಕೊಳ್ಳುತ್ತಾ ಬಂದಿದೆ.

Similar News