ಕ್ರಿಮಿನಲ್ ಗಳು, ವಂಚಕರು ಬಿಜೆಪಿ ಸೇರುತ್ತಿದ್ದಾರೆ ಎಂದ ಅರವಿಂದ್ ಕೇಜ್ರಿವಾಲ್

ಕೇಜ್ರಿವಾಲ್ ‘ಮಹಾವಂಚಕ’: ಸುಕೇಶ್ ಚಂದ್ರಶೇಖರ್‌ನಿಂದ ಇನ್ನೊಂದು ಪತ್ರ

Update: 2022-11-05 17:08 GMT

ಹೊಸದಿಲ್ಲಿ, ನ. 5: ತಿಹಾರ್ ಜೈಲಿ(Tihar Jail)ನಲ್ಲಿರುವ‌ ಆಮ್ ಆದ್ಮಿ ಪಕ್ಷದ (AAP) ನಾಯಕ ಸತ್ಯೇಂದ್ರ ಜೈನ್  ನಿಂದ ನನಗೆ ಬೆದರಿಕೆ ಇದೆ ಎಂದು ಆರೋಪಿಸಿ ಅದೇ ಜೈಲಿನಲ್ಲಿರುವ  ಸುಕೇಶ್ ಚಂದ್ರಶೇಖರ್(Sukesh Chandrasekhar) ಇನ್ನೊಂದು ಸಾರ್ವಜನಿಕ ಪತ್ರವನ್ನು ಬರೆದಿದ್ದಾನೆ ಹಾಗೂ ಆಮ್ ಆದ್ಮಿ ಪಾರ್ಟಿಗೆ ಕೋಟ್ಯಂತರ ರೂಪಾಯಿಗಳನ್ನು ಕೊಟ್ಟಿದ್ದೇನೆ ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ್ದಾನೆ.

‘‘ನನಗೆ 2015ರಿಂದಲೂ ಸತ್ಯೇಂದ್ರಜೈನ್ ಪರಿಚಯವಿದೆ. ಆಪ್ಗೆಈವರೆಗೆ 50 ಕೋಟಿರೂ.ಗಿಂತಲೂಹೆಚ್ಚು ಹಣ ನೀಡಿದ್ದೇನೆ’’ ಎಂದು ತನ್ನ ಪತ್ರದಲ್ಲಿಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ. ಹಣಕ್ಕೆ ಪ್ರತಿಯಾಗಿ ನನಗೆ ರಾಜ್ಯಸಭಾ ಸ್ಥಾನವನ್ನು ಕೊಡುವ ಭರವಸೆಯನ್ನು ಅವರು ನೀಡಿದ್ದರು’’ ಎಂದು ಅವನು ಹೇಳಿದ್ದಾನೆ.

‘‘ಮಿ. ಕೇಜ್ರಿವಾಲ್, ನಿಮ್ಮ ಪ್ರಕಾರ, ನಾನು ದೇಶದ ‘ಅತಿ ದೊಡ್ಡವಂಚಕ’("The Biggest Swindler"). ಹಾಗಾದರೆ, ನೀವು ನನ್ನಿಂದ 50 ಕೋಟಿರೂ. ಯಾಕೆ ಪಡೆದಿರಿಮತ್ತು ರಾಜ್ಯಸಭಾ ಸ್ಥಾನದ ಭರವಸೆಯನ್ನು ಯಾಕೆ ನೀಡಿದಿರಿ? ನಿಮ್ಮನ್ನು ‘ಮಹಾವಂಚಕ’ನಾಗಿ ಮಾಡಿರುವುದು ಯಾವುದು?’’ ಎಂದುಅವನು ಪತ್ರದಲ್ಲಿಬರೆದಿದ್ದಾನೆ.

ಇದಕ್ಕೂ ಮೊದಲು, ಅವನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ಗೆ ಪತ್ರವೊಂದನ್ನು ಬರೆದು, ‘‘ರಕ್ಷಣಾ ಹಣವಾಗಿ ನಾನು ಸತ್ಯೇಂದ್ರ ಜೈನ್ ಗೆ 10 ಕೋಟಿ ರೂಪಾಯಿ ಕೊಟ್ಟಿದ್ದೆನೆ’’ ಎಂದು ಆರೋಪಿಸಿದ್ದನು.

ಕ್ರಿಮಿನಲ್ ಗಳು, ವಂಚಕರು ಬಿಜೆಪಿ ಸೇರುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್

ಸುಕೇಶ್ ಚಂದ್ರಶೇಖರ್ ಮಾಡಿರುವ ಆರೋಪಗಳು, ಬಿಜೆಪಿ ಮತ್ತು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಹೂಡಿರುವ ‘ಪಿತೂರಿಯ ಭಾಗ’ವಾಗಿವೆ ಎಂದು ಆಮ್ ಆದ್ಮಿ ಪಾರ್ಟಿಹೇಳಿದೆ.

‌‘‘ಕ್ರಿಮಿನಲ್ ಗಳು, ಕಳ್ಳರು, ಡಕಾಯಿತರು, ವಂಚಕರು- ಎಲ್ಲಾ ಬಿಜೆಪಿ ಸೇರುತ್ತಿದ್ದಾರೆ’’ ಎಂದು ದಿಲ್ಲಿ ಮುಖ್ಯಮಂತ್ರಿಹಾಗೂ ಆಪ್ ಮುಖ್ಯಸ್ಥ ಅರವಿಂದಕೇಜ್ರಿವಾಲ್ ಶನಿವಾರ ಹೇಳಿದರು.

‘‘ಜೈಲಿನಲ್ಲಿರುವ ಯಾವುದೇ ಕ್ರಿಮಿನಲ್ ಯಾರದೇ ವಿರುದ್ಧ ಏನನ್ನು ಬೇಕಾದರೂ ಹೇಳುವಂತೆ ಅವರು ಮಾಡಬಲ್ಲರು. ಸುಕೇಶ್ ಚಂದ್ರಶೇಖರ್ ಎಂಬ ಒಬ್ಬ ಕ್ರಿಮಿನಲ್ ಇನ್ನು ಕೆಲವೇ ವಾರಗಳಲ್ಲಿ ಬಿಜೆಪಿ ಸೇರಲಿದ್ದಾನೆ ಎಂಬ ಸುದ್ದಿ ನನಗೆ ಬಂದಿದೆ’’ ಎಂದು ಅವರು ಹೇಳಿದರು.

Similar News