ಕಲ್ಯಾಣಪುರ: ಪ್ರಾಕೃತಿಕ ವಿಕೋಪದಿಂದ ಮನೆಗೆ ಹಾನಿ
Update: 2022-11-06 20:58 IST
ಉಡುಪಿ: ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳ ನೇಜಾರು ನಿವಾಸಿ ಜಯಶ್ರೀ ವಿಜಯ ಅವರ ಮನೆಗೆ ಶನಿವಾರ ಸುರಿದ ಅನೀರಿಕ್ಷತ ಗಾಳಿ ಮಳೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಇಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ಧನ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಕೃಷ್ಣ ದೇವಾಡಿಗ, ಉಪಾಧ್ಯಕ್ಷ ಉದಯ್ ಪೂಜಾರಿ, ಗ್ರಾಪಂ ಸದಸ್ಯರುಗಳಾದ ಸತೀಶ್ ನಾಯ್ಕ್, ಜಾನ್ಸನ್, ಪ್ರಶಾಂತ್ ಆಚಾರ್ಯ, ಅನಿತಾ ನಾಯಕ್, ನವೀನ್ ಕಾಂಚನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.