ಕೋವ್ಯಾಕ್ಸಿನ್ ಕೇಳುವವರಿಲ್ಲ: ದಾಸ್ತಾನಿನಲ್ಲೇ ಉಳಿದಿರುವ 50 ಕೋಟಿ ಡೋಸ್ ಕೊರೋನಾ ಲಸಿಕೆ
ಬಯೋಟೆಕ್ ಗೆ ಭಾರೀ ನಷ್ಟದ ಭೀತಿ
ಹೊಸದಿಲ್ಲಿ,ನ.6: ಭಾರತ್ ಬಯೋಟೆಕ್‌ನ ಕೋವಿಡ್-19 ನಿರೋಧಕ ಲಸಿಕೆ ‘ಕೋವ್ಯಾಕ್ಸಿನ್’ನ ಸುಮಾರು 5 ಕೋಟಿ ಡೋಸ್‌ಗಳು ವಿಲೇವಾರಿಯಾಗದೆ ಕಂಪೆನಿಯಲ್ಲಿ ಉಳಿದುಕೊಂಡಿದೆ. ಈ ಲಸಿಕೆಗೆ ಬೇಡಿಕೆ ತೀವ್ರ ಕುಸಿದಿದಿರುವುದೇ ಇದಕ್ಕೆ ಕಾರಣವಾಗಿದೆ. ದಾಸ್ತಾನಿನಲ್ಲಿರುವ ಡೋಸ್‌ಗಳ ವಾಯಿದೆಯು ಮುಂದಿನ ವರ್ಷದ ಆರಂಭದಲ್ಲೇ ಮುಗಿಯಲಿರುವುದರಿಂದ, ಭಾರತ್ ಬಯೋಟೆಕ್ ಭಾರೀ ನಷ್ಟದ ಆತಂಕವನ್ನು ಎದುರಿಸುತ್ತಿದೆ.
2021ರ ಅಂತ್ಯದಲ್ಲಿ 100 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಗುರಿಯನ್ನು ಬಯೋಟೆಕ್ ಪೂರ್ಣಗೊಳಿಸಿದೆಯಾದರೂ, ಬೇಡಿಕೆಯ ಕೊರತೆಯ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದನೆಯನ್ನು ಮುಂದುವರಿಸುವ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.‘‘ಭಾರತ್ ಬಯೋಟೆಕ್20 ಕೋಟಿಗೂ ಅಧಿಕ ಕೋವ್ಯಾಕ್ಸಿನ್ ಲಸಿಕೆಗಳ ದಾಸ್ತಾನನ್ನು ಹೊಂದಿಎದ ಹಾಗೂ ಶೀಷೆಗಳಲ್ಲಿರುವ ಸುಮಾರು 5 ಕೋಟಿ ಡೋಸ್‌ಗಳು ಬಳಕೆಗೆ ಸಿದ್ಧವಿವೆ. ಬೇಡಿಕೆಯ ಕೊರತೆಯ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್‌ನ ಉತ್ಪಾದನೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಈ ವರ್ಷದ ಆರಂಭದಲ್ಲೇ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷ ದಾಸ್ತಾನಿನಲ್ಲಿರವ ಎಲ್ಲಾ 5 ಕೋಟಿ ಡೋಸ್‌ಗಳ ವಾಯಿದೆ ಮುಕ್ತಾಯಗೊಂಡಲ್ಲಿ ಬಯೋಟೆಕ್ ಕಂಪೆನಿಯು ಅಗಾಧ ನಷ್ಟವನ್ನೇ ಅನುಭವಿಸಬೇಕಾದೀತು ಎಂದ ಮೂಲಗಳು ಹೇಳಿವೆ.ನವೆಂಬರ್ 5ರಂದು ಶನಿವಾರ ಭಾರತದಲ್ಲಿ 1092 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ ಸಕ್ಕಿಯ ಪ್ರಕರಣಗಳ ಸಂಖ್ಯೆ 12,500ಕ್ಕೆ ಕುಸಿದಿದೆಯೆಂದು ಆರೋಗ್ಯ ಸಚಿವಲಯದ ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶವು ತಿಳಿಸಿದೆ.ರಾಷ್ಟ್ರವ್ಯಾಪಿಯಾಗಿ ಹಮ್ಮಿಕಕೊಳ್ಳಲಾದ ಲಸಿಕೀಕರಣ ಅಭಿಯಾನದ ಹಿನ್ನೆಲೆಲಿಕೋವ್ಯಾಕ್ಸಿನ್ ಸೇರಿದಂತೆ ಈವರೆಗೆ 219.71 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಜಾಗತಿಕವಾಗಿ ಕೊರೋನಾ ಸಾಂಕ್ರಾಮಿಕದಲ್ಲಿ ಗಣನೀಯ ಕುಸಿತವಾಗಿರುವುದರಿಂದ, ಕೋವ್ಯಾಕ್ಸಿನ್ ಲಸಿಕೆಯ ನಕಾರಾತ್ಮಕ ಪರಿಣಾಮ ಬೀರಿದೆಯೆಂದು ಮೂಲಗಳು ತಿಳಿಸಿವೆ.
ಈ ವರ್ಷದ ಎಪ್ರಿಲ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ, ವಿಶ್ವಸಂಸ್ಥೆಯ ಲಸಿಕೆ ಖರೀದಿ ಏಜೆನ್ಸಿಗಳ ಮೂಲಕ ಕೋವಿಕ್ಸ್ ಪೂರೈಕೆಯನ್ನು ಅಮಾನತಿನಲ್ಲಿಡುವುದಾಗಿ ತಿಳಿಸಿದೆ ಹಾಗೂ ಆ ಲಸಿಕೆಯನ್ನು ಬಳಸಿಕೊಳ್ಳಲುವ ದೇಶಗಳು ಡೋಸ್‌ಗಳ ಖರೀದಿಗಾಗಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿತ್ತು.2022ರ ಮಾರ್ಚ್ 14-22ರ ನಡುವೆ ನಡೆಸಲಾದ ಲಸಿಕೆಯು ತುರ್ತು ಬಳಕೆಯ ದೃಢೀಕರಿಸುವ ಕುರಿತಾಗಿ ಪರಿಶೀಲನೆಯನ್ನು ನಡೆಸಲಾಗಿತ್ತು ಈ ಸಂದರ್ಭದಲ್ಲಿ ಬಯೋಟೆಕ್ ಸಂಸ್ಥೆಯು ಲಸಿಕೆ ಉತ್ಪಾದನೆಯ ಪ್ರಕ್ರಿಯೆಯನ್ನು ಹಾಗೂ ಉತ್ಪಾದನಾ ಸಂಸ್ಥಾಪನೆಯನ್ನು ಉನ್ನತೀಕರಣಗೊಳಿಸುವ ಅಗತ್ಯವಿದೆ ಹಾಗೂ ಇತ್ತೀಚೆಗೆ ಗುರುತಿಸಲಾದ ಉತ್ತಮ ಉತ್ಪಾದನಾ ನಡವಳಿಕೆಯ ಕೊರತೆಯನ್ನು ನೀಗಿಸಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿತ್ತು.2021ರಲ್ಲಿ ಕೋವಿಡ್ 19 ಹಾವಳಿಯು ಉತ್ತುಂಗದಲ್ಲಿದ್ದಾಗ ಬ್ರೆಝಿಲ್ ಸರಕಾರವು ಲಸಿಕೆಯ ಆಮದಿಗೆ ಸಂಬಂಧಿಸಿದಂತೆ ವಿವಾದದಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿತ್ತು ಹಾಗೂ 2 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆಗಳ ಆಮದನ್ನು ಅಮಾನತುಗೊಳಿಸಿತ್ತು.2021ರ ಡಿಸೆಂಬರ್‌ನಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ನೀಡಿದ ಹೇಳಿಕೆಯೊಂದರಲ್ಲಿ ಭಾರತದ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ), ಕೋವ್ಯಾಕ್ಸಿನ್ ಲಸಿಕೆಯ ದಾಸ್ತಾನು ಅವಧಿಯನ್ನು ಉತ್ಪಾದನಾ ದಿನಾಂಕದಿಂದ ಹಿಡಿದು 12 ತಿಂಗಳುಗಳವರೆಗೆ ವಿಸ್ತರಿಸುವುದಕ್ಕೆ ಅನುಮತಿ ನೀಡಿತ್ತು.