ದಾವೂದ್, ಚೋಟಾ ಶಕೀಲ್ , ಸಹಚರರ ವಿರುದ್ಧ ಎನ್ಐಎ ಚಾರ್ಜ್‌ಶೀಟ್‌

Update: 2022-11-06 16:04 GMT

ಚಾರ್ಜ್‌ಶೀಟ್ಹೊಸದಿಲ್ಲಿ, ನ.5: ಭಯೋತ್ಪಾದನೆಗೆ ಆರ್ಥಿಕ ನೆರವಿನ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ,ಆತನ ಸಹೋದರ ಛೋಟಾ ಶಕೀಲ್ ಹಾಗೂ ಅವರ ಸಹಚರರಾದ ಮೂವರು ಬಂಧಿತ ಆರೋಪಿಗಳ ವಿರುದ್ಧ ಶನಿವಾರ ದೋಷಾರೋಪ ಪಟ್ಟಿ ದಾಖಲಿಸಿದೆ.

ದಾವೂದ್ ಹಾಗೂ ಛೋಟಾಶಕೀಲ್ ತಲೆಮರೆಸಿಕೊಂಡಿರುವ ಆರೋಪಿಗಳೆಂದು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ. ಪ್ರಕರಣದ ಬಂಧಿತ ಆರೋಪಿಗಳನ್ನು ಆರೀಫ್ ಶೇಖ್ ಯಾನೆ ಆರೀಫ್ ಭಾಯ್‌ಜಾನ್, ಶಬ್ಬೀರ್ ಶೇಖ್ ಹಾಗೂ ಮುಹಮ್ಮದ್ ಸಲೀಮ್ ಖುರೈಷಿ ಯಾನೆ ಸಲೀಂ ಫ್ರುಟ್ ಎಂದು ಗುರುತಿಸಲಾಗಿದೆ. ದಾವೂದ್ ಇಬ್ರಾಹೀಂ ಹಾಗೂ ಆತನ ಸಹಚರರು ಜಾಗತಿಕ ಭಯೋತ್ಪಾದಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಅಪರಾಧ ಜಾಲವಾದ ಡಿ-ಕಂಪೆನಿಯನ್ನು ನಡೆಸುತ್ತಿದ್ದಾರೆ ಹಾಗೂ ಈ ಜಾಲವು ಭಾರತದಲ್ಲಿ ವಿವಿಧ ಭಯೋತ್ಪದನಾ ಹಾಗೂ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಚಾರ್ಜ್‌ಸೀಟ್‌ನಲ್ಲಿ ಆರೋಪಿಸಲಾಗಿದೆ.

 ಭಯೋತ್ಪಾದಕ ಗ್ಯಾಂಗ್ ಡಿ-ಕಂಪೆನಿಯ ಸದಸ್ಯರಾದ ಈ ಆರೋಪಿಗಳು ವಿವಿಧ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ಯಾಂಗ್‌ನ ಕ್ರಿಮಿನಲ್ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸಂಚು ಹೂಡಿದ್ದರೆಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಒಂದು ನಿರ್ದಿಷ್ಟ ಪ್ರಕರಣದಲ್ಲಿ ಉಗ್ರನೊಬ್ಬನ ಪ್ರಯೋಜನಕ್ಕಾಗಿ ಆರೋಪಿಗಳು ಬೆದರಿಕೆ ಹಾಗೂ ಪ್ರಾಣ ಬೆದರಿಕೆಯನ್ನು ಒಡ್ಡುವ ಮೂಲಕ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಿದ್ದರೆಂದು ಆರೋಪಿಸಲಾಗಿದೆ.

Similar News