ಶ್ರೀಲಂಕಾ ನೌಕಾ ಪಡೆಯಿಂದ 15 ಭಾರತೀಯ ಮೀನುಗಾರರ ಬಂಧನ

Update: 2022-11-06 16:38 GMT

ಚೆನ್ನೈ, ನ. 6: ತಮ್ಮ ದೇಶದ ಜಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆ ಕನಿಷ್ಠ 15 ಮೀನುಗಾರರನ್ನು ಬಂಧಿಸಿದೆ ಹಾಗೂ ಅವರ ಎರಡು ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದೆ.

ನೌಕಾಪಡೆಯ ತಲೈಮನ್ನಾರ್ ಕಸ್ಟಡಿಯಲ್ಲಿರುವ ಮೀನುಗಾರರನ್ನು ಮೀನುಗಾರಿಕಾ ಇನ್ಸ್‌ಪೆಕ್ಟರ್‌ಗೆ ಹಸ್ತಾಂತರಿಸಲಾಗುವುದು ಎಂದು ಶ್ರೀಲಂಕಾ ನೌಕಾ ಪಡೆಯ ಹೇಳಿಕೆ ತಿಳಿಸಿದೆ. ಉಭಯ ದೇಶಗಳ ನಡುವೆ ಹಲವು ಬಾರಿ ಉನ್ನತ ಮಟ್ಟದ ಮಾತುಕತೆ ನಡೆದ ಹೊರತಾಗಿಯೂ ಶ್ರೀಲಂಕಾದ ಜಲ ಪ್ರದೇಶದಲ್ಲಿ ಭಾರತೀಯ ಮೀನುಗಾರರು ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿರುವುದು ಮರುಕಳಿಸುತ್ತಿರುವ ಸಮಸ್ಯೆಯಾಗಿದೆ ಎಂದು ಶ್ರೀಲಂಕಾ ನೌಕಾ ಪಡೆ ಹೇಳಿದೆ. 

ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸತಿ ಪ್ರದೇಶವಾದ  ತಲೈಮನ್ನಾರ್‌ನಿಂದ ಶನಿವಾರ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾ ಪಡೆಯ ಹೇಳಿಕೆ ತಿಳಿಸಿದೆ.

Similar News