×
Ad

ಮಲ್ಪೆ ಸರಕಾರಿ ಕಾಲೇಜಿಗೆ ನುಗ್ಗಿ ಕಳವು

Update: 2022-11-08 21:21 IST

ಮಲ್ಪೆ: ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ನುಗ್ಗಿದ ಕಳ್ಳರು, ಸಾವಿರಾರು ರೂ. ಮೌಲ್ಯದ ಚಿನ್ನದ ಪದಕಗಳು ಹಾಗೂ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ನ.5ರ ಮಧ್ಯಾಹ್ನದಿಂದ ನ.7ರ ಬೆಳಗಿನ ಮಧ್ಯಾವಧಿಯಲ್ಲಿ ಕಾಲೇಜಿನ ಪ್ರಾಚಾರ್ಯರ ಕೊಠಡಿ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿ ನಲ್ಲಿದ್ದ ಸರಕಾರದಿಂದ ಜಿಲ್ಲಾ ಮಟ್ಟದ ಉತ್ತಮ ಪಲಿತಾಂಶಕ್ಕಾಗಿ ಕೊಟ್ಟ 10 ಗ್ರಾಂ ಚಿನ್ನದ ಪದಕ ಮತ್ತು  5 ಗ್ರಾಂ ಚಿನ್ನದ ಪದಕ ಹಾಗೂ 5100ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ75100ರೂ. ಎಂದು ಅಂದಾಜಿಸಲಾಗಿದೆ.

ಅಲ್ಲದೇ ಕಳ್ಳರು ಕಾಲೇಜಿನ ಕಂಪೌಂಡಿನ ಒಳಗೆ ಇರುವ ಸರಕಾರಿ ಪ್ರೌಡ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರ ಕೊಠಡಿ ಮತ್ತು ಕಛೇರಿಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.  

Similar News