ಸಾಗರ : ಅಧಿಕಾರಿಗಳ ಕಿರುಕುಳ ಆರೋಪ; ದಯಾಮರಣಕ್ಕೆ ದಂಪತಿ ಮನವಿ

Update: 2022-11-10 03:05 GMT

ಸಾಗರ : ಜಮೀನಿನ ವಿಚಾರದಲ್ಲಿ ಕೆಲ ಸರಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ತಾಲೂಕಿನ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ದಂಪತಿ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಉಪವಿಭಾಗಾಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ಹಾಗೂ ಸುಜಾತಾ ನಾಯಕ್ ದಂಪತಿ ಬುಧವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ದಯಾಮರಣಕ್ಕೆ ಅನುಮತಿ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಮ್ಮ ಸ್ವಂತದ ಜಮೀನಿನಲ್ಲಿ ನಗರ ಹಾಗೂ ಗ್ರಾಮಾಂತರ ಯೋಜನೆಯಡಿ ಅನುಮೋದನೆಗೊಂಡ ಶೇ. 52ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು 10 ಲಕ್ಷ ರೂ. ಲಂಚ ಕೇಳಿದ್ದರು. ಬಡ ರೈತ ಕುಟುಂಬದ ಹಿನ್ನೆಲೆಯ ನಾನು ಲಂಚ ನೀಡಿಲ್ಲ. ಇದೇ ಕಾರಣಕ್ಕಾಗಿ ಅವರು ಅಧಿಕಾರ ದುರ್ಬಳಕೆ ಮಾಡಿ, ಕುಟುಂಬಕ್ಕೆ ಆರ್ಥಿಕ ನಷ್ಟವಾಗುವಂತೆ ಮಾಡಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇಡೀ ಕುಟುಂಬದವರು ಮಾನಸಿಕವಾಗಿ ನೊಂದಿದ್ದು, ಅಸಹಾಯಕರಾಗಿ ಈಗ ದಯಾ ಮರಣ ಕೋರುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಹೇಳಿದರು.

Similar News