ಜ್ಞಾನವಾಪಿ ಕಾಶಿ ವಿಶ್ವನಾಥ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಂದ ನಾಳೆ ಪೀಠ ರಚನೆ

Update: 2022-11-10 07:52 GMT

ಹೊಸದಿಲ್ಲಿ: ಜ್ಞಾನವಾಪಿ ಕಾಶಿ ವಿಶ್ವನಾಥ್‌ ಪ್ರಕರಣದ ವಿಚಾರಣೆಗೆ ಶುಕ್ರವಾರ ಪೀಠ ಸ್ಥಾಪಿಸಲು ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದ್ದು, ಜ್ಞಾನವಾಪಿ ಆವರಣದಲ್ಲಿ “ಶಿವಲಿಂಗ” ಪತ್ತೆಯಾದ ಜಾಗದ ರಕ್ಷಣೆಗೆ ಆದೇಶವನ್ನು ವಿಸ್ತರಿಸುವಂತೆ ಹಿಂದೂ ಪರ ವಕೀಲರು ಕೋರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠವು ಗುರುವಾರ ಕೆಲವು ಹಿಂದೂ ಭಕ್ತರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್ ಅವರ ಸಲ್ಲಿಕೆಗಳನ್ನು ಗಮನಿಸಿತು ಹಾಗೂ  ರಕ್ಷಣೆ ನೀಡುವ ಆದೇಶವು ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದೆ.

“ನಾವು ನಾಳೆ ಮಧ್ಯಾಹ್ನ 3 ಗಂಟೆಗೆ ಪೀಠವನ್ನು ರಚಿಸುತ್ತೇವೆ’’ ಎಂದು ಸಿಜೆಐ ಹೇಳಿದರು.

ವಾರಣಾಸಿಯ ಜ್ಞಾನವಾಪಿ ಆವರಣದೊಳಗಿನ ಪ್ರದೇಶವನ್ನು ಸಂರಕ್ಷಿಸುವಂತೆ ಮೇ 17 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು.

Similar News