ಎಕ್ಸಿಸ್ ಬ್ಯಾಂಕ್‌ನಲ್ಲಿಯ ತನ್ನ ಸಂಪೂರ್ಣ ಶೇರುಗಳನ್ನು ಮಾರಾಟಕ್ಕಿಟ್ಟ ಕೇಂದ್ರ

Update: 2022-11-10 14:54 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಎಕ್ಸಿಸ್ ಬ್ಯಾಂಕ್‌(Axis Bank)ನಲ್ಲಿರುವ ತನ್ನ ಶೇ.1.55 ಪಾಲು ಬಂಡವಾಳವನ್ನು ಮಾರಾಟ ಮಾಡುತ್ತಿದೆ. ಸರಕಾರಿ ಸ್ವಾಮ್ಯದ ಸ್ಪೆಸಿಫೈಡ್ ಅಂಡರ್‌ಟೇಕಿಂಗ್ ಆಫ್ ದಿ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ (Specified Undertaking of the Unit Trust of India)(ಎಸ್‌ಯುಯುಟಿಐ) ಮೂಲಕ ಕೇಂದ್ರವು ಹೊಂದಿರುವ 4.65 ಕೋಟಿ ಶೇರುಗಳ ಮಾರಾಟ ಗುರುವಾರದಿಂದ ಆರಂಭಗೊಂಡಿದ್ದು, ಶುಕ್ರವಾರ ಅಂತ್ಯಗೊಳ್ಳಲಿದೆ. ಈ ಪ್ರಕ್ರಿಯೆ ಯಶಸ್ವಿಯಾದರೆ ಕೇಂದ್ರವು ಎಕ್ಸಿಸ್ ಬ್ಯಾಂಕ್‌ನಿಂದ ಸಂಪೂರ್ಣವಾಗಿ ಹೊರಬೀಳುತ್ತದೆ. ಶೇರುಗಳ ಮಾರಾಟದಿಂದ ಸುಮಾರು 4,000 ಕೋ.ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.

ಎಸ್‌ಯುಯುಟಿಐ ತಾನು ಮಾರಾಟ ಮಾಡುತ್ತಿರುವ ಪ್ರತಿ ಎಕ್ಸಿಸ್ ಬ್ಯಾಂಕ್ ಶೇರಿಗೆ 830.63 ರೂ.ದರವನ್ನು ನಿಗದಿಗೊಳಿಸಿದೆ. ಗುರುವಾರವನ್ನು ಸಗಟು ಹೂಡಿಕೆದಾರರಿಂದ ಬಿಡ್‌ಗಳ ಸಲ್ಲಿಕೆಗೆ ಮೀಸಲಿಟ್ಟಿದ್ದು, ಶುಕ್ರವಾರ ಚಿಲ್ಲರೆ ಹೂಡಿಕೆದಾರರು ಬಿಡ್‌ಗಳನ್ನು ಸಲ್ಲಿಸಲಿದ್ದಾರೆ.

Similar News