ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆಗೂ ತಟ್ಟಿದ ʻಭಾರತದ ಕ್ರಿಕೆಟ್‌ ಸೋಲುʼ!

Update: 2022-11-11 09:54 GMT

ಜಿನೇವಾ: ಗುರುವಾರ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ (T20 World Cup) ಸೆಮಿಫೈನಲ್‌ ಪಂದ್ಯದಲ್ಲಿ ಭಾರತ (India) ತಂಡ ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಸೋಲಿನ ವಿಚಾರ ದೂರದ ಜಿನೇವಾದಲ್ಲಿ (Geneva) ನಡೆಯುತ್ತಿದ್ದ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿ (UN Rights Council) ಸಭೆಗೂ ( ಪರೋಕ್ಷವಾಗಿ ತಟ್ಟಿದೆ. ಭಾರತದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಪರಿಶೀಲನೆಗೆ ಈ ಯುನಿವರ್ಸಲ್‌ ಪೀರಿಯಾಡಿಕ್‌ ರಿವೀವ್‌ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು  ವಿವಿಧ ವಿಚಾರಗಳ ಬಗ್ಗೆ ತಮ್ಮ ಕಳವಳವನ್ನು ಭಾರತಕ್ಕೆ ವ್ಯಕ್ತಪಡಿಸಿದವು.

ಇಂಗ್ಲೆಂಡ್‌ ದೇಶ ಪ್ರತಿನಿಧಿ ತಮ್ಮ ಮಾತುಗಳನ್ನು ಕೊನೆಗೊಳಿಸುವ ವೇಳೆ ಎಲ್ಲರ ನಗುವಿನ ನಡುವೆ "ಧನ್ಯವಾದಗಳು ಆದರೆ ನಾನು ಕ್ರಿಕೆಟ್‌ ಅನ್ನು ಉಲ್ಲೇಖಿಸಲೇ ಇಲ್ಲ," ಎಂದರು.

ಇನ್ನೊಂದೆಡೆ ತಮ್ಮ ಮುಕ್ತಾಯದ ಭಾಷಣ ಮಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್‌ ವರ್ಮ, "ನನ್ನ ಇಂಗ್ಲೆಂಡ್‌ನ ಸಹೋದ್ಯೋಗಿಯವರಿಗಿಂತ ಭಿನ್ನವಾಗಿ, ಕ್ರಿಕೆಟ್‌ ಅನ್ನು ಉಲ್ಲೇಖಿಸಲು ಇಂದು ನಮಗೆ ಖಂಡಿತಾ ಯಾವುದೇ ಕಾರಣವಿಲ್ಲ,ʼʼ ಎಂದರು.

ಇದನ್ನೂ ಓದಿ: ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ದೋಷಿಯ ಪುತ್ರಿಗೆ ಬಿಜೆಪಿ ಟಿಕೆಟ್ !

Similar News