ಜ್ಞಾನವಾಪಿ ಮಸೀದಿಯಲ್ಲಿ ದೊರಕಿದೆ ಎನ್ನಲಾದ 'ಶಿವಲಿಂಗ‌' ರಕ್ಷಣೆಯ ಆದೇಶ ವಿಸ್ತರಿಸಿದ ಸುಪ್ರೀಂಕೋರ್ಟ್

Update: 2022-11-11 10:41 GMT

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ಸದ್ಯಕ್ಕೆ ಯಥಾಸ್ಥಿತಿಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ ನಂತರ, ನಿರ್ದಿಷ್ಟ ಪ್ರದೇಶದ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ಮೇ ತಿಂಗಳಿನ ಆದೇಶವನ್ನು ವಿಸ್ತರಿಸಿದೆ.

ಕೆಲವು ಹಿಂದೂ ಭಕ್ತರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್ ಅವರು ನವೆಂಬರ್ 12 ರಂದು ಪ್ರದೇಶ ರಕ್ಷಣೆ ಅವಧಿ ಮುಕ್ತಾಯವಾಗಲಿದೆ ಎಂದು ಒತ್ತಿ ಹೇಳಿದ ನಂತರ ನಿನ್ನೆ ನ್ಯಾಯಾಲಯ ಹೇಳಿರುವುದಕ್ಕೆ ಈ ಹೇಳಿಕೆ ಅನುಗುಣವಾಗಿದೆ.

ನ್ಯಾಯಾಲಯದ ಆದೇಶದ ಸಮೀಕ್ಷೆಯಲ್ಲಿ "ಶಿವಲಿಂಗ" ಪತ್ತೆಯಾಗಿದೆ ಎಂದು ಹೇಳಲಾದ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಒಳಗಿನ ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು. ನೀರಿನ ಕಾರಂಜಿಯ ತಳವನ್ನು ಶಿವಲಿಂಗ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಮುಸ್ಲಿಮರು ಹೇಳಿದ್ದರು.

Similar News