ಜಿಮ್‌ ನಲ್ಲಿ ಕುಸಿದು ಬಿದ್ದು ಖ್ಯಾತ ಟಿವಿ ನಟ ಸಿದ್ಧಾಂತ್‌ ವೀರ್‌ ಸೂರ್ಯವಂಶಿ ನಿಧನ

Update: 2022-11-11 11:39 GMT

ಹೊಸದಿಲ್ಲಿ: 'ಕುಸುಮ್' ಮತ್ತು 'ಕಸೌತಿ ಜಿಂದಗಿ ಕೇ' ನಂತಹ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಖ್ಯಾತ ದೂರದರ್ಶನ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಶುಕ್ರವಾರ ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು. ಅವರು ಜಿಮ್‌ನಲ್ಲಿ ಬೆಳಗ್ಗೆ 11 ಗಂಟೆಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಪತ್ನಿ ಅಲೆಸಿಯಾ ರಾವುತ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಟ ಜಯ್ ಭಾನುಶಾಲಿ ಸೇರಿದಂತೆ ಹಲವರು ಸೂರ್ಯವಂಶಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

ಆನಂದ್ ಸೂರ್ಯವಂಶಿ ಎಂದೂ ಕರೆಯಲ್ಪಡುವ ಸಿದ್ದಾಂತ್ ವೀರ್ ಸೂರ್ಯವಂಶಿ ದೂರದರ್ಶನ ಜಗತ್ತಿನಲ್ಲಿ ಜನಪ್ರಿಯ ಮುಖವಾಗಿದ್ದರು. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ 'ಕುಸುಮ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಅವರು 'ಕಸೌತಿ ಜಿಂದಗಿ ಕೇ', 'ಸುಫಿಯಾನಾ ಇಷ್ಕ್ ಮೇರಾ', 'ಜಿದ್ದಿ ದಿಲ್ ಮಾನೆ ನಾ' ಮತ್ತು 'ವಾರಿಸ್' ಸೇರಿದಂತೆ ಹಲವಾರು ಇತರ ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು.

Similar News