ನೇಪಾಳ: ಜೀತದಾಳುಗಳಾಗಿದ್ದ 38 ಭಾರತೀಯರ ರಕ್ಷಣೆ

Update: 2022-11-12 17:58 GMT

ಕಠ್ಮಂಡು, ನ.12: ನೇಪಾಳದ ರೌತಾಹತ್ (Rautahat)ಪ್ರದೇಶದ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಮಹಿಳೆಯರು, ಮಕ್ಕಳ ಸಹಿತ ಕನಿಷ್ಟ 38 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ನಿವಾಸಿಗಳಾದ 20 ಪುರುಷರು ಹಾಗೂ  18 ಮಹಿಳೆಯರು, ಮಕ್ಕಳ ತಂಡವು ಜಿಲ್ಲೆಯ ಇಟ್ಟಿಗೆ ಕಾರ್ಖಾನೆ(Brick factory)ಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಈ ಬಗ್ಗೆ ತನಿಖೆ ನಡೆಸಲು ಪೊಲೀಸರ ತಂಡವನ್ನು ಆ ಪ್ರದೇಶಕ್ಕೆ ರವಾನಿಸಲಾಗಿತ್ತು.

ಇಟ್ಟಿಗೆ ಕಾರ್ಖಾನೆಯಲ್ಲಿ ಮಹಿಳೆಯರು, ಮಕ್ಕಳ ಸಹಿತ 38 ಭಾರತೀಯರು ಜೀತದಾಳುಗಳಾಗಿ ದುಡಿಯುತ್ತಿದ್ದರು. ಅವರನ್ನು ರಕ್ಷಿಸಿ ಬಿಹಾರದ ಸಿತಾಮಡಿ ಜಿಲ್ಲೆಯ ಗಡಿಭಾಗದಲ್ಲಿ  `ಸಶಸ್ತç ಸೀಮಾ ಬಲ'ದ ಅಧಿಕಾರಿಗೆ ಹಸ್ತಾಂತರಿಸಲಾಗಿದೆ . ಈ ಪ್ರದೇಶದ ಇನ್ನೂ ಕೆಲವು ಇಟ್ಟಿಗೆ ಕಾರ್ಖಾನೆಗಳಲ್ಲಿ ನೂರಾರು ಭಾರತೀಯರು ಜೀತದಾಳುಗಳಾಗಿ ದುಡಿಯುತ್ತಿರುವ ಮಾಹಿತಿಯಿದೆ ಎಂದು ಪೊಲೀಸರು ಹೇಳಿದ್ದಾರೆ. 

Similar News