ಮಧ್ಯಪ್ರದೇಶ: 5 ವರ್ಷದ ದಿವ್ಯ ಚೇತನ ಬಾಲಕಿಯ ಅತ್ಯಾಚಾರ

Update: 2022-11-12 18:12 GMT

ಭೋಪಾಲ, ನ. 12: ಮಧ್ಯಪ್ರದೇಶ ರಾಜಧಾನಿ ಭೋಪಾಲ್(Bhopal) ನಲ್ಲಿ ಐದು ವರ್ಷದ ಮೂಗಮತ್ತು ಕಿವುಡ ದಲಿತ ಬಾಲಕಿಯ ಮೇಲೆ ಪಕ್ಕದ ಮನೆಯ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭೋಪಾಲ್ ನ ಕೋಲಾರ್ (Kolar)ಪ್ರದೇಶದಲ್ಲಿ ಗುರುವಾರ ಸಂಜೆ ಈ ಕೃತ್ಯ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು 56 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆ, ಪೋಕ್ಸೊ ಮತ್ತು ದಲಿತ (POCSO and Dalit)ದೌರ್ಜನ್ಯ ಕಾಯ್ದೆಗಳ ವಿಧಿಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಆತನನ್ನು ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ.

ಈ ನಡುವೆ, ಅಧಿಕಾರಿಗಳು ಶುಕ್ರವಾರ ಆರೋಪಿಯ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನು ಧ್ವಂಸಗೊಳಿಸಿದ್ದಾರೆ.

Similar News