×
Ad

ರಾಷ್ಟ್ರೀಯ ಕರಾಟೆ ಚಾಂಪಿಯನ್: ನಫೀಸಾ ಹಿಬಾಗೆ ಎರಡು ಚಿನ್ನದ ಪದಕ

Update: 2022-11-14 21:47 IST

ಉಡುಪಿ: ಅಮೃತ್ ಗಾರ್ಡನ್‌ನಲ್ಲಿ ಇತ್ತೀಚೆಗೆ ನಡೆದ ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ 40ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್-2022ರ ಸ್ಪರ್ಧೆಯಲ್ಲಿ ನಫೀಸಾ ಹಿಬಾ ಕುತ್ತಾರ್ ಅವರು ವೈಯುಕ್ತಿಕ ಕಟಾ ಹಾಗೂ ಕುಮಿಟ ವಿಭಾಗದಲ್ಲಿ ಎರಡು ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಮಾಜಿ ಶಾಸಕ ಕವಿ ಮರ್ಹೂಂ ಬಿ.ಎಂ.ಇದ್ದಿನಬ್ಬ ಅವರ ಮರಿ ಮೊಮ್ಮಗಳಾದ ಈಕೆ ಯಾಸೀರ್ ಅರಾಫತ್ ಹಾಗೂ ಕೌಶರ್ ಪಕ್ಕಲಡ್ಕ ದಂಪತಿಯ ಪುತ್ರಿ. ಹಿರಾ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ ವಿನೋದ್ ಅವರಿಂದ ತರಬೇತಿ ಪಡೆದಿರುತ್ತಾರೆ.

Similar News