ಕತರ್‌ ವಿಶ್ವಕಪ್‌ ಸ್ಟೇಡಿಯಂ ಸುತ್ತಮುತ್ತ ಬಿಯರ್‌ ಮಾರಾಟಕ್ಕೆ ನಿಷೇಧ: ಫಿಫಾ

Update: 2022-11-18 13:45 GMT

ದೋಹಾ: ಫಿಫಾ ಮತ್ತು ಕತಾರ್ ಎಂಟು ವಿಶ್ವಕಪ್ ಸ್ಟೇಡಿಯಂಗಳ ಸುತ್ತಲೂ ಬಿಯರ್ ಮಾರಾಟವನ್ನು ನಿಷೇಧಿಸಿವೆ.  ಆಲ್ಕೋಹಾಲ್ ಸೇವನೆಯನ್ನು ತೀವ್ರವಾಗಿ ನಿರ್ಬಂಧಿಸುವ ಕತಾರ್‌ನೊಂದಿಗೆ "ಚರ್ಚೆಗಳ" ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಫುಟ್‌ಬಾಲ್‌ನ ವಿಶ್ವ ಸಂಸ್ಥೆ ಹೇಳಿದೆ.  "ಕತಾರ್‌ನ FIFA ವಿಶ್ವಕಪ್ 2022 ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಬಿಯರ್‌ ಮಾರಾಟದ ಕೇಂದ್ರಗಳನ್ನು ತೆಗೆದುಹಾಕಲಾಗುತ್ತಿದೆ" ಎಂದು ಫಿಫಾ ಹೇಳಿದೆ. 

ಕತಾರ್ ಮತ್ತು ಈಕ್ವೆಡಾರ್ ನಡುವಿನ ಮೊದಲ ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸಮೀಪ ಡಜನ್‌ಗಟ್ಟಲೆ ಬಿಯರ್ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿತ್ತು. ಅಲ್ಲದೆ, AB InBev ಒಡೆತನದ ಪ್ರಮುಖ ಬಿಯರ್ ಉತ್ಪಾದಕ ಬಡ್‌ವೈಸರ್‌ನೊಂದಿಗೆ FIFA ದೀರ್ಘಕಾಲದ ಪ್ರಾಯೋಜಕತ್ವದ ಒಪ್ಪಂದವನ್ನು ಹೊಂದಿದೆ.

 ಅದಾಗ್ಯೂ, ಬಿಯರ್ ಮೇಲಿನ ನಿಷೇಧವನ್ನು ಒಪ್ಪಿಕೊಂಡ AB InBev ನಿರ್ಧಾರವನ್ನು ಕ್ರೀಡಾಕೂಟದ ಆಯೋಜಕರು ಶ್ಲಾಘಿಸುತ್ತಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

Similar News