ಕಾಸರಗೋಡು ಜಿಲ್ಲೆಯ ಕಾನೂನು ಸುವ್ಯವಸ್ಥೆಗಳ ಬಗ್ಗೆ ಅವಲೋಕನ

Update: 2022-11-18 13:45 GMT

ಕಾಸರಗೋಡು :  ಅಪರಾಧ ಕೃತ್ಯ  ಹಾಗೂ ಮಾದಕ ವಸ್ತು ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುವಂತೆ ರಾಜ್ಯ  ಪೊಲೀಸ್  ಮಹಾ ನಿರ್ದೇಶಕ  ಅನಿಲ್ ಕಾಂತ್  ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ  ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಳ ಬಗ್ಗೆ  ಅವಲೋಕನ ನಡೆಸಿದರು. ಮಾದಕ ವಸ್ತು ಹಾಗೂ ಗೂಂಡಾ ಚಟು ವಟಿ ಕೆಗಳ  ನಿಗ್ರಹಕ್ಕೆ ಕ್ರಮ ತೆಗೆದು ಕೊಳ್ಳುವಂತೆ ಅದೇಶಿದರು. ಶಬರಿಮಲೆ  ಉತ್ಸವ ಅವಧಿಯಲ್ಲಿ ತೆಗೆದು ಕೊಳ್ಳ ಬೇಕಾದ ಕ್ರಮಗಳ ಕುರಿತು ಹಾಗೂ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಜನ ಸಾಮಾನ್ಯರ ಜೊತೆ ಉತ್ತರ ರೀತಿಯಲ್ಲಿ  ಸ್ಪಂದಿಸುವಂತೆ ಸಲಹೆ ನೀಡಿದರು.

ಕೋಝಿಕ್ಕೋಡ್ ಸಿಟಿ ಪೊಲೀಸ್ ಆಯುಕ್ತ  ಎ.ಅಕ್ಬರ್,  ಕಣ್ಣೂರು ವಲಯ ಡೆಪ್ಯುಟಿ ಇನ್ಸ್ಪೆಕ್ಟರ್  ರಾಹುಲ್ ಆರ್. ನಾಯರ್, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ, ಪಿ. ಕೆ ರಾಜು ಮೊದಲಾದವರು ಉಪಸ್ಥಿತರಿದ್ದರು.

Similar News