ನಮ್ಮ ಪರಮಾಣು ಚಟುವಟಿಕೆ ಬಗ್ಗೆ ವಿಶ್ವಸಂಸ್ಥೆಯ ಪರಮಾಣು ನಿಗಾ ಸಮಿತಿಗೆ ತಿಳಿದಿದೆ: ಇರಾನ್

Update: 2022-11-18 18:14 GMT

ಟೆಹ್ರಾನ್, ನ.18: ವಿಶ್ವಸಂಸ್ಥೆಯ ಪರಮಾಣು ನಿಗಾ ಸಮಿತಿ(ಐಎಇಎ)ಗೆ ಇರಾನ್ನ ಎಲ್ಲಾ ಪರಮಾಣು ಚಟುವಟಿಕೆಯ ಬಗ್ಗೆ ಮಾಹಿತಿಯಿದೆ ಎಂದು ಇರಾನ್ ಪರಮಾಣು ಶಕ್ತಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಲಾಮಿ ಶುಕ್ರವಾರ ಹೇಳಿದ್ದಾರೆ. 

ಇರಾನ್ನಲ್ಲಿ ಮೂರು ಅಘೋಷಿತ ಸ್ಥಳಗಳಲ್ಲಿ ಯುರೇನಿಯಂ ಕುರುಹು ಪತ್ತೆಯಾಗಿರುವುದಕ್ಕೆ ವಿವರಣೆ ನೀಡುವಂತೆ ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ) ಆಗ್ರಹಿಸಿದ ಮರುದಿನ ಇರಾನ್ನ ಈ ಹೇಳಿಕೆ ಹೊರಬಿದ್ದಿದೆ.

ಯುರೇನಿಯಂ ಮೂಲದ ಬಗ್ಗೆ ಹಾಗೂ ಐಎಇಎ ಎತ್ತಿರುವ ಇತರ ಕೆಲವು ಆಕ್ಷೇಪಗಳ ಬಗ್ಗೆ ಇರಾನ್ ತುರ್ತು ವಿವರಣೆ ನೀಡುವುದು ಅಗತ್ಯವಾಗಿದೆ ಎಂದು ಗುರುವಾರ ಮಂಡಿಸಲಾದ ಕರಡು ನಿರ್ಣಯದಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಪ್ರತಿಪಾದಿಸಿವೆ. ಇದಕ್ಕೆ ಉತ್ತರಿಸಿರುವ ಇರಾನ್, ಐಎಇಎಗೆ ತಿಳಿಯದೆ ಇರುವ ಯಾವುದನ್ನೂ ಇರಾನ್ ಮಾಡುತ್ತಿಲ್ಲ. ನಮ್ಮ ಚಟುವಟಿಕೆ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿದೆ ಎಂದಿದೆ.

Similar News