ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್

Update: 2022-11-20 02:57 GMT

ನ್ಯೂಯಾರ್ಕ್: ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪನೆ ಮಾಡುವ ಬಗ್ಗೆ ಅರ್ಧಕ್ಕಿಂತ ಹೆಚ್ಚು ಮಂದಿ ಬಳಕೆದಾರರು ಒಲವು ತೋರಿಸಿದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷರ ಟ್ವಿಟರ್ ಖಾತೆ ಪುನಃಸ್ಥಾಪನೆ ಮಾಡಲಾಗುವುದು ಎಂದು ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಆದರೆ ಟ್ವಿಟರ್‌ಗೆ ಮರಳಲು ತಮಗೆ ಆಸಕ್ತಿ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ 15 ದಶಲಕ್ಷ ಮಂದಿಯ ಪೈಕಿ ಶೇಕಡ 51.8ರಷ್ಟು ಮಂದಿ ಖಾತೆ ಮರುಸ್ಥಾಪನೆಗೆ ಪರ ನಿಲುವು ವ್ಯಕ್ತಪಡಿಸಿದ್ದರು. "ಜನ ಮಾತನಾಡಿದ್ದಾರೆ. ಟ್ರಂಪ್ ಅವರ ಖಾತೆ ಪುನಃಸ್ಥಾಪನೆಯಾಗಲಿದೆ" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಜ್ಯೂಯಿಷ್ ಕೋಯಿಲೇಶನ್‍ನ ವಾರ್ಷಿಕ ನಾಯಕತ್ವ ಸಭೆಯಲ್ಲಿ, ಟ್ವಿಟರ್‌ಗೆ ಮರಳುವ ಉದ್ದೇಶ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಟ್ರಂಪ್, "ಇದಕ್ಕೆ ಯಾವುದೇ ಸಕಾರಣ ಕಾಣಿಸುತ್ತಿಲ್ಲ" ಎಂದು ಉತ್ತರಿಸಿದರು.

ಹೊಸ ಪ್ಲಾಟ್‍ಫಾರಂ ಟ್ರುತ್ ಸೋಶಿಯಲ್‍ಗೇ ತಾವು ಅಂಟಿಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು. ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ (ಟಿಎಂಟಿಜಿ) ಎಂಬ ಸ್ಟಾರ್ಟಪ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಇದು ಟ್ವಿಟರ್‌ಗೆ ಹೋಲಿಸಿದರೆ ಬಳಕೆದಾರರ ಉತ್ತಮ ತೊಡಗಿಸಿಕೊಳ್ಳುವಿಕೆಯನ್ನು ಹೊಂದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಬಗ್ಗೆ  timesofindia.com ವರದಿ ಮಾಡಿದೆ.

Similar News