ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್: ಮುಹಮ್ಮದ್ ಶಾಮೀಲ್ ಅರ್ಷದ್‌ಗೆ ಚಿನ್ನದ ಪದಕ

Update: 2022-11-20 18:23 GMT

ಬೆಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನವೆಂಬರ್ 16 - 19 ವರೆಗೆ ಬೆಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್ ನಲ್ಲಿ 14-17 ವರ್ಷದ ಬಾಲಕರ ಇನ್ ಲೆನ್  ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಹೈ - ಫ್ಲೈಯರ್ಸ್ (ಆರ್) ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಮುಹಮ್ಮದ್ ಶಾಮೀಲ್ ಅರ್ಷದ್ ರವರು 500 + ಡೀ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ , 100 ಮೀಟರ್ ರೋಡ್ ರೇಸ್ ನಲ್ಲಿ ಬೆಳ್ಳಿಯ ಪದಕ , 200 ಮೀಟರ್ ಡ್ಯುಯೆಲ್ ಟಿ ಟಿ ರೇಸ್ ನಲ್ಲಿ ಚಿನ್ನದ ಪದಕ, ಒನ್ ಲ್ಯಾಪ್ ರೋಡ್ ರೇಸ್ ನಲ್ಲಿ ಬೆಳ್ಳಿಯ ಪದಕಗಳನ್ನು ಪಡೆದುಕೊಂಡಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಇವರು ಯೆನೆಪೊಯ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ. ಮೋಹನ ದಾಸ್ ಹಾಗೂ ಜಯರಾಜ್ ಅವರ ಮಾರ್ಗದರ್ಶನದಲ್ಲಿ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅರ್ಷದ್ ಹುಸೈನ್ ಹಾಗೂ ರಂಲತ್ ಅರ್ಷದ್ ದಂಪತಿಯ ಪುತ್ರ.

Similar News