ಇಸ್ರೇಲ್: ಮಾನನಷ್ಟ ಮೊಕದ್ದಮೆ ಗೆದ್ದ ನೆತನ್ಯಾಹು

Update: 2022-11-21 16:43 GMT

ಜೆರುಸಲೇಂ, ನ.21: ಇಸ್ರೇಲ್ ನ ನಿಯೋಜಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu)ತನ್ನ ವಿರುದ್ಧ ಮಾಜಿ ಪ್ರಧಾನಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದಿರುವುದಾಗಿ ವರದಿಯಾಗಿದೆ.

ನೆತನ್ಯಾಹು, ಅವರ ಪತ್ನಿ ಸಾರಾ (Sara)ಮತ್ತು ಪುತ್ರ ಯಾಯಿರ್ (Yair)ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಹುದ್ ಆಲ್ಮರ್ಟ್ (Hud Almert)ಟಿವಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಇದು ತನ್ನ ರಾಜಕೀಯ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗೌರವಕ್ಕೆ ಕುಂದು ತಂದಿದೆ ಎಂದು ನೆತನ್ಯಾಹು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಟೆಲ್ಅವೀವ್ ಮ್ಯಾಜಿಸ್ಟ್ರೇಟ್  ನ್ಯಾಯಾಲಯ, ನೆತನ್ಯಾಹು, ಸಾರಾ ಮತ್ತು ಯಾಯಿರ್ ರನ್ನು ಬಿಂಬಿಸಿದ ರೀತಿಯು ಈ ಮೂವರನ್ನು ದ್ವೇಷ, ಅಪಹಾಸ್ಯಕ್ಕೆ ಒಡ್ಡಿದೆ. ಪ್ರತಿವಾದಿ ತಮ್ಮ ಹೇಳಿಕೆಗೆ ಆಧಾರವಾಗಿ ವೈದ್ಯಕೀಯ ಪುರಾವೆ ಒದಗಿಸಲು ಅಸಮರ್ಥರಾಗಿರುವುದರಿಂದ ಅವರು ಅರ್ಜಿದಾರರಿಗೆ 17,850 ಡಾಲರ್ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ತೀರ್ಪು ನೀಡಿದೆ. 

Similar News