ಟ್ವಿಟರ್ ನ ಫ್ರಾನ್ಸ್ ವಿಭಾಗದ ಮುಖ್ಯಸ್ಥರ ರಾಜೀನಾಮೆ

Update: 2022-11-21 17:45 GMT

ಪ್ಯಾರಿಸ್, ನ.21: ಟ್ವಿಟರ್ ಸಂಸ್ಥೆಯ ಫ್ರೆಂಚ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಡೇಮಿಯನ  ವಿಯೆಲ್ (Damian Viel)ಟ್ವಿಟರ್ ತೊರೆಯುವುದಾಗಿ ಸೋಮವಾರ ಹೇಳಿದ್ದಾರೆ.

ಅದು ಮುಗಿದಿದೆ' ಎಂದು ಅವರು ಟ್ವೀಟ್ ಮಾಡಿ ತಮ್ಮ ರಾಜೀನಾಮೆಯನ್ನು ದೃಢಪಡಿಸಿದ್ದು ಕಳೆದ 7 ವರ್ಷಗಳಿಂದ ತನ್ನೊಂದಿಗೆ ಕೆಲಸ ಮಾಡಿದ ಫ್ರಾನ್ಸ್‍ನ ಟೀಂಗೆ ಧನ್ಯವಾದಗಳನ್ನು ವಿಯೆಲ್ ಅರ್ಪಿಸಿದ್ದಾರೆ. ಬಳಿಕ , ಟ್ವಿಟರ್ ತೊರೆಯುವುದಾಗಿ ರಾಯ್ಟರ್ಸ್ ಸಂಸ್ಥೆ(Reuters Institute)ಗೆ ಪ್ರತ್ಯೇಕ ಸಂದೇಶವನ್ನೂ ರವಾನಿಸಿದ್ದಾರೆ.

ತನ್ನ ನಿರ್ಗಮನಕ್ಕೆ ಕಾರಣವಾದ ಅಂಶಗಳ ಬಗ್ಗೆ ಅಥವಾ ಟ್ವಿಟರ್ ಸಂಸ್ಥೆಗೆ ಎಲಾನ್ ಮಸ್ಕ್ ಮಾಲಕರಾದ ಬಳಿಕ ಫ್ರಾನ್ಸ್ ವಿಭಾಗದ ಎಷ್ಟು ಸಿಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಬಗ್ಗೆ ವಿಯೆಲ್ ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಯ್ಟರ್ಸ್ ಹೇಳಿದೆ. 

Similar News