ಅರ್ನಬ್ ವಿರುದ್ಧದ FIRಗೆ ತಡೆ ನೀಡಿದ ಹೈಕೋರ್ಟ್ ಕ್ರಮ ವಿರುದ್ಧ ಸುಪ್ರೀಂಗೆ ಸಲ್ಲಿಸಿದ ಅರ್ಜಿ ಹಿಂಪಡೆದ ಮಹಾರಾಷ್ಟ್ರ

Update: 2022-11-22 10:02 GMT

ಮುಂಬೈ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ (Arnab Goswami) ವಿರುದ್ಧ ಪ್ರಚೋದಕ ಹೇಳಿಕೆ ನೀಡಿರುವ ಆರೋಪದಲ್ಲಿ ಎಫ್‍ಐಆರ್ (FIR) ದಾಖಲಿಸದಂತೆ ಮುಂಬೈ ಹೈಕೋರ್ಟ್ 2020ರಲ್ಲಿ ನೀಡಿದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಮಹಾರಾಷ್ಟ್ರ ಸರ್ಕಾರ ಸೋಮವಾರ ವಾಪಾಸು ಪಡೆದಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು.

ಮುಂಬೈ ಹೈಕೋರ್ಟ್‍ನ ಆದೇಶ ಮಧ್ಯಂತರ ಆದೇಶವಾಗಿದ್ದು, ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಾಪಾಸು ಪಡೆಯುವಂತೆ ಸೂಚನೆ ಇದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅರ್ಜಿ ವಾಪಾಸು ಪಡೆಯಲು ಅವಕಾಶ ನೀಡಲಾಯಿತು. ಆದರೆ ಈ ಎಫ್‍ಐಆರ್‍ಗಳಿಗೆ ಮುಂಬೈ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಪಾಲ್ಗರ್ ಗುಂಪು ಹತ್ಯೆ ಪ್ರಕರಣದ ವರದಿ ಮಾಡುವ ವಿಚಾರದಲ್ಲಿ ಕೋಮುಬಣ್ಣ ಬಳಿದಿದ್ದಾರೆ ಎಂದು ಆಪಾದಿಸಿ ಗೋಸ್ವಾಮಿ ವಿರುದ್ಧ ಎರಡು ಎಫ್‍ಐಆರ್ ದಾಖಲಾಗಿತ್ತು. ಮತ್ತೊಂದು ಪ್ರಕರಣ ಲಾಕ್‍ಡೌನ್ ಅವಧಿಯಲ್ಲಿ ಬಾಂದ್ರಾ ಸ್ಟೇಡಿಯಂ ಹೊರಗಡೆ ವಲಸೆ ಕಾರ್ಯಮಿಕರು ಜಮಾವಣೆಗೊಂಡ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು.

ಗೋಸ್ವಾಮಿ, ಧರ್ಮದ ಆಧಾರದಲ್ಲಿ ಸಾಮರಸ್ಯ ಕೆಡಿಸುವ ಹಾಗೂ ದ್ವೇಷ ಬೆಳೆಸಲು ಪ್ರಚೋದಿಸಿದ್ದಾರೆ ಎಂದು ಹೇಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ: 'ಅನುಮತಿ ರದ್ದತಿ ಬಳಿಕವೂ BJP ಕಚೇರಿಯಲ್ಲೇ ಮತದಾರರ ಮಾಹಿತಿ ಕಳವಿಗೆ 'ಚಿಲುಮೆ'ಯಿಂದ ತರಬೇತಿ'

Similar News